ಸಿಲ್ವರ್​ ಕಲರ್​ ಪ್ಯಾಂಟಿನಲ್ಲಿ ಮಿಂಚಿದ ದೀಪಿಕಾ! ಇಷ್ಟಕ್ಕೂ ಬಾಲಿವುಡ್​ ಬೆಡಗಿಯ ಉಡುಪು ಸುದ್ದಿಯಾಗಿದ್ದು ಯಾಕೆ ಗೊತ್ತಾ?!

ಬಾಲಿವುಡ್​ನ ಸ್ಟೈಲಿಶ್​ ಹಾಗೂ ಅತ್ಯಂತ ಹೆಚ್ಚಿನ ಸಂಭಾವನೆ ಪಡೆಯುವ ನಟಿ ದೀಪಿಕಾ ಪಡುಕೋಣೆ. ಒಂದಿಲ್ಲೊಂದು ಕಾರಣಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಸುದ್ದಿಯಲ್ಲಿರುವ ದೀಪಿಕಾ ಇದೀಗ ತಮ್ಮ ಉಡುಪಿನ ಕಾರಣಕ್ಕೆ ಸುದ್ದಿಯಾಗಿದ್ದಾರೆ.

ad


ಹೌದು ಮೊನ್ನೆ ಸಮಾರಂಭವೊಂದಕ್ಕಾಗಿ ದೀಪಿಕಾ ಪಡುಕೋಣೆ ಸಿಲ್ವರ್​ ಬಣ್ಣದ ಪ್ಯಾಂಟ್ ಹಾಗೂ ವೈಟ್​ ಟಾಪ್​ ಧರಿಸಿದ್ದರು. ಈ ವೇಳೆ ಅವರ ಪ್ಯಾಂಟ್​ ಎಲ್ಲರ ಗಮನ ಸೆಳೆದಿದ್ದು, ಹೀಗೆ ಮನಸೆಳೆದ ಪ್ಯಾಂಟ್​​ನ ದರ ಎಷ್ಟು ಗೊತ್ತಾ ಬರೋಬ್ಬರಿ 64 ಸಾವಿರದ 400 ರೂಪಾಯಿ.


ದೀಪಿಕಾ ಆನ್​ಲೈನ್​ ಶಾಪಿಂಗ್​ನಲ್ಲಿ ಈ ಪ್ಯಾಂಟ್​ನ್ನು ಸೆಲೆಕ್ಟ್ ಮಾಡಿ ತರಿಸಿಕೊಂಡಿದ್ದಾರಂತೆ. ಆದರೆ ಯಾವ ವಿಶೇಷ ಕಾರಣಕ್ಕೆ ದೀಪಿಕಾ ಇಂಥ ಕ್ವಾಸ್ಟಲೀ ಪ್ಯಾಂಟ್​ ಧರಿಸಿದ್ದರು ಎಂಬುದು ಗೊತ್ತಾಗಿಲ್ಲ. ಇನ್ನು ಈ ಸುಂದರ್ ಕಾಸ್ಟ್ಯೂಮ್​​ನಲ್ಲಿನ ಪೋಟೋಗಳನ್ನು ದೀಪಿಕಾ ತಮ್ಮ ಇನ್​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.


ಈ ಹಿಂದೆ ಮೆಟ್​ ಗಾಲಾ ಹಾಗೂ ಕ್ಯಾನ್​ ಚಿತ್ರೋತ್ಸವದ ರೆಡ್ ಕಾರ್ಪೆಟ್​ ನಲ್ಲಿ ಕೂಡ ತಮ್ಮ ವಿಭಿನ್ನ ಕಾಸ್ಟ್ಯೂಮ್​​ನಿಂದ ಮಿಂಚಿದ್ದರು.