ಕನ್ನಡಕ್ಕೆ ಗುಡ್ ಬೈ ಎಂದಳಾ ಕಿರಿಕ್ ಬ್ಯೂಟಿ?- ರಶ್ಮಿಕಾ ಕತೆಯೇನು?

 

ಇತ್ತೀಚಿಗಷ್ಟೇ ಸ್ಯಾಂಡಲವುಡ್​ನ ಉದಯೋನ್ಮುಖ ನಟ ರಕ್ಷಿತ್​ ಶೆಟ್ಟಿಯೊಂದಿಗೆ ಎಂಗೆಜಮೆಂಟ್​ ಮುರಿದುಕೊಂಡು ಸುದ್ದಿಯಾಗಿದ್ದ ನಟಿ ರಶ್ಮಿಕಾ ಮಂದಣ್ಣ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಭಾರಿ ರಶ್ಮಿಕಾ ವಿಷಯದಲ್ಲಿ ಹುಟ್ಟಿಕೊಂಡಿರುವ ಸುದ್ದಿ ಶಾಕಿಂಗ್​ ಆಗಿದೆ. ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗಕ್ಕೆ ಗುಡ್​ ಬೈ ಹೇಳಲಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಇದು ರಕ್ಷಿತ್ ಮತ್ತು ರಶ್ಮಿಕಾ ಬ್ರೇಕಪ್​ನ ಸೈಡ್​ ಎಫೆಕ್ಟ್​ ಎನ್ನಲಾಗುತ್ತಿದ್ದು, ಇದೇ ಕಾರಣಕ್ಕೆ ರಷ್ಮಿಕಾ ಮಂದಣ್ಣ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ವೃತ್ರ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದ ರಶ್ಮಿಕಾ ಆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಯಜಮಾನ ಶೂಟಿಂಗ್​ ನಂತ್ರ ರಶ್ಮಿಕಾ ವೃತ್ರ ಚಿತ್ರಕ್ಕೆ ಫೋಟೋ ಶೂಟ್ ಕೂಡಾ ಮಾಡಿದ್ದರು. ಈ ಚಿತ್ರದಿಂದ ಇದೀಗ ರಶ್ಮಿಕಾ ಹಿಂದೆ ಸರಿಯುತ್ತಿದ್ದಾರೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಹಬ್ಬಿದೆ. ತೆಲುಗಿನಲ್ಲಿ ಉತ್ತಮ ಆಫರ್​ಗಳು ಬರ್ತಿರೋದ್ರಿಂದ ಸ್ಯಾಂಡಲ್​ವುಡ್​ಗೆ ಗುಡ್​ ಬೈ ಹೇಳಲು ನಿರ್ಧಾರ ಮಾಡಿದ್ದಾರೆ. ಕನ್ನಡಕ್ಕಿಂತ ತೆಲುಗಿನಲ್ಲಿ ಹೆಚ್ಚು ಸಂಭಾವನೆ ಸಿಗ್ತಿರೋದ್ರಿಂದ ರಶ್ಮಿಕಾ ಈ ನಿರ್ಣಯಕ್ಕೆ ಬಂದಿದ್ದಾರೆ.
ಈ ಮಧ್ಯೆ ಬ್ರೇಕಪ್​ನಿಂದ ಬೇಸರಗೊಂಡಿರುವ ನಟ ರಕ್ಷಿತ್​ ಶೆಟ್ಟಿ ಹಾಲಿಡೇ ಟ್ರಿಪ್​ ಹೆಸರಲ್ಲಿ ಥಾಯ್ಲೆಂಡ್​ಗೆ ಹೋಗಿದ್ದಾರೆ. ತಾವು ಥಾಯ್ಲೆಂಡ್​ನಲ್ಲಿರೋ ಫೋಟೋವನ್ನು ರಕ್ಷಿತ್​​​ ಟ್ವಿಟರ್​​ ಅಕೌಂಟ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ತೆಲುಗಿನ ಗೀತಾ ಗೋವಿಂದಂ ಚಿತ್ರದ ಲಿಪ್​​ಲಾಕ್​​​ ಸೀನ್​​​ನಲ್ಲಿ ರಶ್ಮಿಕಾ ಕಂಡು ಬಂದ ನಂತ್ರ ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಬ್ರೇಕ್​​ ಅಪ್ ಸುದ್ದಿ ಬಲವಾಗಿ ಹರಡಿದೆ.