ಶಿರೂರು ಶ್ರೀ ಸಾವಿಗೆ ಕಾರಣವಾಯ್ತು ಆ ಪುಸ್ತಕ !? ಪೇಜಾವರರಿಗೂ ಉಡುಪಿ ಅಷ್ಠ ಮಠಕ್ಕೂ ಸಂಬಂಧವೇ ಇಲ್ಲವೆಂಬ ಭಯಾನಕ ಕತೆಯಿದು !!

ನಿಗೂಢವಾಗಿ ಸಾವನ್ನಪ್ಪಿದ ಶಿರೂರು ಲಕ್ಷ್ಮೀವರ ತೀರ್ಥ ಶ್ರೀಪಾದರ ಸಾವಿಗೆ ಕಾರಣವೇನು ಎಂಬ ತನಿಖೆ ನಡೆಯುತ್ತಿದೆ. ಈ ಮಧ್ಯೆ ಶಿರೂರು ಸ್ವಾಮೀಜಿ ಸಾವಿಗೆ ಅವರು ಬರೆಯಲೊರಟಿದ್ದ ಆತ್ಮಕತೆಯೂ ಕಾರಣವಿರಬಹುದೇ ಎಂಬ ಅನುಮಾನಗಳು ಮೂಡಲಾರಂಭಿಸಿದೆ.

ad

ಹೌದು. ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳು ಆತ್ಮಕತೆ ಬರೆಯಲು ಮುಂದಾಗಿದ್ದರಂತೆ. ಮಠದ ಮೂಲಗಳು ಹೇಳುವ ಪ್ರಕಾರ ಶ್ರೀಗಳು ತನ್ನ ಆತ್ಮಕತೆಯನ್ನು ಬರೆಯಲು ಬರಹಗಾರರೊಬ್ಬರನ್ನು ಹುಡುಕುತ್ತಿದ್ದರು. ಮೂಲಗಳ ಪ್ರಕಾರ ಶಿರೂರು ಶ್ರೀಗಳ ಆತ್ಮಕತೆ ಪ್ರಾರಂಭವಾಗುವುದೇ ಪೇಜಾವರ ವಿಶ್ವೇಶತೀರ್ಥ ಶ್ರೀಪಾದಂಗಳವರ ಸನ್ಯಾಸತ್ವ ಸ್ವೀಕಾರದ ಕತೆಯಿಂದ. ವಿಶ್ವೇಶತೀರ್ಥ ಶ್ರೀಪಾದಂಗಳವರು ತನ್ನ ಆರನೇ ವಯಸ್ಸಿಗೆ ಸನ್ಯಾಸತ್ವ ಸ್ವೀಕರಿಸಿದರೆ, ಶಿರೂರು ಲಕ್ಷ್ಮೀವರ ತೀರ್ಥರು ಎಂಟನೇ ವಯಸ್ಸಿಗೆ ಸನ್ಯಾಸತ್ವ ಸ್ವೀಕರಿಸಿದರು.

ವಿಶ್ವೇಶತೀರ್ಥ ಶ್ರೀಪಾದಂಗಳು ಸನ್ಯಾಸತ್ವ ದೀಕ್ಷೆ ತೆಗೆದುಕೊಳ್ಳುವಾಗ ಉಡುಪಿ ಅಷ್ಟಮಠದಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ವಿಶ್ವೇಶತೀರ್ಥರು ಉಡುಪಿಯ ಮಾಧ್ವ ಅಷ್ಠಮಠಗಳ ಸ್ವಾಮೀಜಿಯಿಂದ ದೀಕ್ಷೆ ಪಡೆದಿರಲಿಲ್ಲ. ಬದಲಾಗಿ ಸುಬ್ರಹ್ಮಣ್ಯ ಸ್ವಾಮೀಜಿಗಳಿಂದ ದೀಕ್ಷೆ ಪಡೆದಿದ್ದರು. ನಿಯಮದ ಪ್ರಕಾರ ಅಷ್ಠಮಠದ ಸ್ವಾಮೀಜಿಗಳಿಂದ ಸ್ವಾಮಿಗಳು ದೀಕ್ಷೆ ಪಡೆಯಬೇಕು. ಅಷ್ಠಮಠದ ಸ್ವಾಮಿಗಳಿಂದ ದೀಕ್ಷೆ ಪಡೆಯದ ವಿಶ್ವೇಶತೀರ್ಥರನ್ನು ಅಷ್ಠಮಠದ ಸ್ವಾಮೀಜಿ ಎಂದು ಒಪ್ಪಿಕೊಳ್ಳಲು ಆಗಿನ ಕಾಲದಲ್ಲಿ ಸಿದ್ದರಿರಲಿಲ್ಲವಂತೆ. ಆಗಿನ ಕಾಣಿಯೂರು ಮಠದ ವಿದ್ಯಾ ಸಮುದ್ರತೀರ್ಥ ಸ್ವಾಮೀಜಿಗಳು ಪೇಜಾವರ ವಿಶ್ವೇಶತೀರ್ಥರು ಮೊದಲ ಪರ್ಯಾಯ ಪೀಠವೇರುವುದನ್ನೂ ವಿರೋಧಿಸಿದ್ದರು. ವಿದ್ಯಾಸಮುದ್ರತೀರ್ಥರು ಹರಿಐಕ್ಯವಾಗುವವರೆಗೂ ಪೇಜಾವರ ವಿಶ್ವೇಶತೀರ್ಥರು ಉಡುಪಿಯ ಅಷ್ಠಮಠಗಳ ಸ್ವಾಮೀಜಿ ಎಂದು ಒಪ್ಪಲು ಸಿದ್ದರಿರಲಿಲ್ಲವಂತೆ. ಇವೆಲ್ಲವೂ ಶಿರೂರು ಶ್ರೀಗಳ ಆತ್ಮಚರಿತ್ರೆಯಲ್ಲಿ ಇರಲಿತ್ತು ಎಂಬುದು ಮಾಹಿತಿಗಳ ಮೂಲಗಳು ತಿಳಿಸುತ್ತದೆ.

ಶ್ರೀಗಳ ಆತ್ಮಚರಿತ್ರೆ ಇಡೀ ಉಡುಪಿ ಅಷ್ಠಮಠಕ್ಕೆ ಸಂಬಂದಿಸಿದ್ದೇ ಆಗಿತ್ತು ಎಂಬ ಮಾಹಿತಿ ಪೇಜಾವರ ಸೇರಿದಂತೆ ಎಲ್ಲಾ ಮಠಾಧೀಶರ ಆತಂಕಕ್ಕೆ ಕಾರಣವಾಗಿತ್ತು.