ಡಿ ಕೆ ಶಿವಕುಮಾರ್ ಗೆ 58 ರ ಸಂಭ್ರಮ !! ಬರಗಾಲದ ಹಿನ್ನಲೆಯಲ್ಲಿ ಸರಳ ಬರ್ತ್ ಡೇ ಆಚರಿಸಿಕೊಂಡ ಜಲಸಂಪನ್ಮೂಲ ಸಚಿವ !!

ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ಗೆ ಇಂದು 58 ರ ಹುಟ್ಟು ಹಬ್ಬದ ಸಂಭ್ರಮ. ಬರಗಾಲದ ಹಿನ್ನಲೆಯಲ್ಲಿ ಅದ್ದೂರಿ ಹುಟ್ಟು ಹಬ್ಬ ಬೇಡ ಎಂದು ಡಿ ಕೆ ಶಿವಕುಮಾರ್ ತನ್ನ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದರು. ಅದರಂತೆ ಅದ್ದೂರಿತನವಿಲ್ಲದೆ ಸರಳವಾಗಿ ಡಿ ಕೆ ಶಿವಕುಮಾರ್ ಬರ್ತ್ ಡೇ ಆಚರಿಸಿಕೊಂಡರು.

ad

58ನೇ ವಸಂತಕ್ಕೆ ಕಾಲಿಟ್ಟಿರೋ ಡಿಕೆ ಶಿವಕುಮಾರ್, ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ಸರಳವಾಗಿ ಬರ್ತ್ಡೇ ಆಚರಿಸಿಕೊಂಡ್ರು. ಡಿ ಕೆ ಶಿವಕುಮಾರ್ ಬರ್ತ್ ಡೇ ಆಚರಣೆ ಬೇಡ ಎಂದು ಹೇಳಿದರೂ ಪಟ್ಟು ಬಿಡದ ಅಭಿಮಾನಿಗಳು ಕೇಕ್ ತಂದು ಕತ್ತರಿಸಿದರು. ಅಭಿಮಾನಿಗಳ ಒತ್ತಡಕ್ಕೆ ಮಣಿದು ಕಾರ್ಯಕರ್ತರು ತಂದಿದ್ದ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದ್ರು.
ಹುಟ್ಟುಹಬ್ಬದ ಕೇಕ್ ಕತ್ತರಿಸಿ ಅಭಿಮಾನಿಗಳ ಜೊತೆ ಸರಳವಾಗಿ ಬರ್ತ್ ಡೇ ಆಚರಿಸಿಕೊಂಡ ಡಿ ಕೆ ಶಿವಕುಮಾರ್, ಆ ಬಳಿಕ ಉಪಚುನಾವಣೆಯ ರಾಜಕೀಯದಲ್ಲಿ ತೊಡಗಿಕೊಂಡರು. ಕುಂದಗೋಳ ಮತ್ತು ಚಿಂಚೋಳಿ ಕಾರ್ಯಕರ್ತರ ಜೊತೆ ಚರ್ಚೆ ನಡೆಸಿ, ಬಾಕಿ ಉಳಿದರುವ ಕೆಲವೇ ದಿನಗಳಲ್ಲಿ ಆಗಬೇಕಿರೋ ತಂತ್ರಗಾರಿಕೆಗಳ ಬಗ್ಗೆ ಚರ್ಚಿಸಿದ್ರು.