ಆ ತಂದೆ ತಾಯಿ ಮಗಳ ಆತ್ಮವನ್ನು ಆಹ್ವಾನಿಸಿದ್ದೇಕೆ ಗೊತ್ತಾ?!

ಕೊಡಗಿನಲ್ಲಿ ಭೀಕರ ಮಳೆಯಿಂದ ಉಂಟಾದ ಅನಾಹುತದ ಎಫೆಕ್ಟ್​ ಇನ್ನು ಕಡಿಮೆಯಾಗಿಲ್ಲ. ಈ ಮಧ್ಯೆ ಭೂಕುಸಿತದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ದೇಹ ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ ನೊಂದ ಆಕೆಯ ಹೆತ್ತವರು ನೋವಿನಿಂದಲೇ ಆಕೆಯ ಆತ್ಮವನ್ನು ಆಹ್ವಾನಿಸಿ ಅಂತ್ಯ ಸಂಸ್ಕಾರ ನಡೆಸಿದ ವಿಚಿತ್ರ ಘಟನೆ ಕೊಡಗಿನಲ್ಲಿ ನಡೆದಿದೆ. ಮಡಿಕೇರಿ ಸಮೀಪದ ಜೋಡುಪಾಲದಲ್ಲಿ ಆಗಸ್ಟ್ 16 ರಂದು ಭೂಕುಸಿತವಾಗಿ ಮಂಜುಳ ಎಂಬ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಕೊಚ್ಚಿ ಹೋಗಿದ್ದರು. ಇವರಲ್ಲಿ ಮೂವರ ದೇಹ ಪತ್ತೆಯಾಯಿತಾದರೂ ಮಂಜುಳಾ

ad


 

ದೇಹ ಇನ್ನೂ ಪತ್ತೆಯಾಗಿಲ್ಲ. ಹಾಗಾಗಿ ತಮ್ಮ ಸಂಪ್ರದಾಯದಂತೆ ಮಂಜುಳ ಪೋಷಕರು ಮತ್ತು ಕುಟುಂಬಸ್ಥರು ಮಂಜುಳಾಳ ದೇಹದ ಪ್ರತಿರೂಪಕ್ಕೆ ಅಂತ್ಯ ಸಂಸ್ಕಾರ ನಡೆಸಿದರು. ಸೃಷ್ಟಿಸಿ ಅದನ್ನು ಮದುವಣಗಿತ್ತಿಯಂತೆ ಅಲಂಕಾರಗೊಳಸಿಲಾಯಿತು. ಘಟನೆ ನಡೆದಾಗ ಮಂಜುಳ ಅವರ ಚಿಕ್ಕಪ್ಪನ ಮನೆಯಲ್ಲಿ ವಾಸವಿದ್ದಳು.ಮನೆ ಕೊಚ್ಚಿಹೋದ ಜಾಗದಲ್ಲಿ ಅವರ ಪದ್ಧತಿಯಂತೆ ಜರತಾರಿ ಸೀರಯುಡಿಸಿ, ವಿವಿಧ ಆಭರಣಗಳನ್ನು ಹಾಕಿ ಮಂಜುಳಾಳ ಅಕ್ಕರೆಯ ಬ್ಯಾಗ್ ತೊಡಿಸಲಾಯಿತು. ಬಳಿಕ ಮಂಜುಳ ಆತ್ಮವನ್ನು ಮನೆಗೆ ಬರುವಂತೆ ತಂದೆ ಆಹ್ವಾನಿಸಿದ್ರು ಈ ಸಂದರ್ಭ ಕುಟುಂಬಸ್ಥರ ರೋಧನ ಕರಳು ಹಿಂಡುವಂತಿತ್ತು. ಇನ್ನು ಈ ಕರುಣಾಜನಕ ಸಂದರ್ಭಕ್ಕೆ ಮಂಜುಳಾಲ ಸಹಪಾಠಿಗಳು ಹಾಜರಿದ್ದು, ಮೌನವಾಗಿ ಕಂಬನಿ ಮಿಡಿದರು.