ಉಡುಪಿಯಲ್ಲಿ ಮನುಷ್ಯನ ಕಿವಿ ಬಿರಿಯಾನಿ !! ಕೃಷ್ಣಮಠದ ಪಾರ್ಕಿಂಗ್ ಮೈದಾನದಲ್ಲಿ ಬಿರಿಯಾನಿಯದ್ದೇ ಸದ್ದು !!

ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ವೆಜ್ ಬಿರಿಯಾನಿ ಬಗ್ಗೆ ಕೇಳಿದ್ದೀರಿ. ಇನ್ನೂ ಕೆಲ ಪ್ರಾಣಿಗಳ ಬಿರಿಯಾನಿ ತಿಂದು ಖುಷಿಪಟ್ಟವರಿದ್ದಾರೆ. ಆದರೆ ಮನುಷ್ಯನ ಕಿವಿಯ ಬಿರಿಯಾನಿ ತಿಂದ್ರೆ ಹೇಗಿರುತ್ತೆ. ಈ ರೀತಿಯ ಟೇಸ್ಟ್ ಮಾಡಿದ್ದಾನೆ ಉಡುಪಿಯ ಚಾಲಕ.

ಹೌದು. ಉಡುಪಿಯ ಕೃಷ್ಣಮಠದ ಪಾರ್ಕಿಂಗ್ ನಲ್ಲಿ ಒಂದೇ ತಟ್ಟೆಯಲ್ಲಿ ತಿಂದು, ಕುಡಿದ ಸ್ನೇಹಿತರು ಅಮಲೇರಿದಾಗ ಕಚ್ಚಾಡಿದ್ದಾರೆ. ಅದೂ ಬರೇ ಕಚ್ಚಾಟವಲ್ಲ, ಜಗಳದಲ್ಲಿ ಇಬ್ಬರೂ ಪರಸ್ಪರ ಕಿವಿ ಕಚ್ಚಿ ತಿಂದು ಘಾಸಿಮಾಡಿದ್ದಾರೆ. ಉಡುಪಿಯ ಕೃಷ್ಣಮಠಕ್ಕೆ ಪ್ರವಾಸಿಗಳನ್ನು ಕರೆತಂದ ಉತ್ತರ ಕರ್ನಾಟಕ ಭಾಗದ ಚಾಲಕರಿಬ್ವರು ಪರಸ್ಪರ ಕಚ್ಚಿಕೊಂಡ ವಿಲಕ್ಷಣ ಘಟನೆ ನಡೆದಿದೆ. ಮಠದ ಪಾರ್ಕಿಂಗ್ ಮೈದಾನದಲ್ಲಿ ಈ ಗೆಳೆಯರ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಚಾಲಕ ಮಧು ಎಂಬಾತನ ಕಿವಿಯನ್ನು ಸುರೇಶ ಎಂಬ ಇನ್ನೊಬ್ಬ ಚಾಲಕ ಕಚ್ಚಿ ಹರಿದಿದ್ದಾನೆ. ಬಿರಿಯಾನಿ ತುಂಡಿಗಾಗಿ ನಡೆದ ಜಗಳ ಕಿವಿ ಕಚ್ಚೋದ್ರ ಜೊತೆ ಮುಕ್ತಾಯವಾಗಿದೆ. ಎಣ್ಣೆ ಅಮಲಿನಲ್ಲಿ ಆತ ಬಿರಿಯಾನಿ ಜೊತೆಗೆ ಕಿವಿಯನ್ನೂ ತಿಂದಿರುವ ಶಂಕೆಯಿದೆ. ಕಿವಿ ಹರಿಸಿಕೊಂಡವನಿಂದ ನಗರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ