2 ಕೋಟಿಗೆ ಡಿಮ್ಯಾಂಡ್​ ಮಾಡಿದ್ದ ನಾಲ್ವರು ಪತ್ರಕರ್ತರ ಪ್ರಕರಣಕ್ಕೆ ಸಿಕ್ಕಿದೆ ಸ್ಫೋಟಕ ಟ್ವಿಸ್ಟ್​

2 ಕೋಟಿಗೆ ಡಿಮ್ಯಾಂಡ್​ ಮಾಡಿದ್ದ ನಾಲ್ವರು ಪತ್ರಕರ್ತರ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​ ಸಿಕ್ಕಿದೆ. ಫೆಬ್ರವರಿ 14ರಂದು ಕಮರ್ಷಿಯಲ್​ ಸ್ಟ್ರೀಟ್​ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದ ಪತ್ರಕರ್ತರ ವಿರುದ್ಧ ಬ್ಲಾಕ್​ಮೇಲ್​ ಪ್ರಕರಣವನ್ನು ಬೆಂಗಳೂರು ಪೊಲೀಸ್​​ ಕಮೀಷನರ್ ಸಿಸಿಬಿಗೆ ಪ್ರಕರಣ ವರ್ಗಾಯಿಸಿದ್ದಾರೆ.​

ad

ಪ್ರತಿಷ್ಠಿತ ಜುವೆಲರಿ ಕಂಪೆನಿಯಿಂದ ಕನ್ನಡದ ಖಾಸಗಿ ಟಿವಿ ಚಾನಲ್​ ನಾಲ್ವರು ಪತ್ರಕರ್ತರು 2 ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ರು. ಹಣ ನೀಡದಿದ್ರೆ ಕಂಪನಿ ವಿರುದ್ಧ ವರದಿ ಪ್ರಸಾರ ಮಾಡೋದಾಗಿ ಬ್ಲಾಕ್​ಮೇಲ್​​ ಮಾಡಿದ್ರು. ಈ ಬಗ್ಗೆ ಜ್ಯುವೆಲರಿ ಮಾಲೀಕ ನಿಜಾಮುದ್ದಿನ್ ಪತ್ರಕರ್ತರರಾದ ರಾಕೇಶ್​ ಶೆಟ್ಟಿ, ವಿನೋದ್​ಕುಮಾರ್​, ಚಂದ್ರಶೇಖರ್​, ಚಂದನ್​ ಎಂಬ ನಾಲ್ವರು ಪತ್ರಕರ್ತರ ವಿರುದ್ಧ FIR​ ಸಂ.24/2019 ಅಡಿಯಲ್ಲಿ IPC-384 ಸೆಕ್ಷನ್​ ನಮೂದಿಸಿ,ಐಪಿಸಿ 384ರ ಅಡಿ ಸುಲಿಗೆ ಪ್ರಕರಣ ಕೇಸ್​ ದಾಖಲು ಮಾಡಲಾಗಿತ್ತು.

FIR​ ​ ದಾಖಲಾದರೂ ಕಮರ್ಷಿಯಲ್​ ಸ್ಟ್ರೀಟ್​ ಪೊಲೀಸರು ಕ್ರಮ ಕೈಗೊಂಡಿಲ್ಲ. ಆದ್ದರಿಂದ ಇದೀಗಾ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದು ಇಂದಿನಿಂದ ಸಿಸಿಬಿ ತನಿಖೆ ಆರಂಭಿಸಲಿದ್ದಾರೆ. ಅಲ್ದೇ, ನಾಲ್ವರು ಆರೋಪಿ ಪತ್ರಕರ್ತರ ಜಾಮೀನು ರದ್ದುಪಡಿಸಿ ಇಂದು ಬಂಧಿಸುವ ಸಾಧ್ಯತೆಯಿದೆ.