ರೈತ ಹುತಾತ್ಮ ದಿನದೊಂದು ಬಂಡಾಯದ ನಾಡು ನವಲಗುಂದ ಪಟ್ಟಣದಲ್ಲಿ ರೈತರ ಗರ್ಜನೆ, ಮಹದಾಯಿ,‌ ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯ…

 

ad

ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಬಂಡಾಯದ ನಾಡು ನವಲಗುಂದ ಪಟ್ಟಣದಲ್ಲಿ ಹುತಾತ್ಮರಾದ ರೈತರಿಗೆ ಶ್ರದ್ಧಾಂಜಲಿ  ಸಲ್ಲಿಸಲಾಯಿತು. ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ, ರೈತ ಮುಖಂಡರು ಹಲವು ಮಾಠಾಧೀಶರು ಸೇರಿದಂತೆ ಸಂಘ ಸಂಸ್ಥೆಯ ಮುಖಂಡರು ವೀರಗಲ್ಲಿಗೆ ಮಾಲಾರ್ಪಣೆ ಮಾಡಿದ್ರು.1980 ದಶಕದಲ್ಲಿ ಆರ್ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀರಿನ ಕರ ಆಕರಣೆ ವಿರುದ್ಧ ನಡೆದ ಹೋರಾಟದಲ್ಲಿ ಚಿಕ್ಕ ನರಗುಂದ ರೈತ ಈರಣ್ಣ ಕಡ್ಲಿಕೊಪ್ಪ ಹಾಗೂ ಅಳಗವಾಡಿ ರೈತ ಬಸಪ್ಪ ಲಕ್ಕುಂಡಿ ಪೊಲೀಸರ ಗುಂಡೇಟಿಕೆ ಬಲಿಯಾಗಿದ್ರು. ಆಗ ರೈತರ ಆಕ್ರೋಶಕ್ಕೆ ಆಗಿನ ಗುಂಡೂರಾವ್ ಸರ್ಕಾರ ಸಹ ಪತನವಾಗಿತ್ತು.

ಅಂದಿನಿಂದ 38 ವರ್ಷಗಳಿಂದ ರೈತ ಹುತಾತ್ಮ ದಿನಾಚರಣೆ ಆಚರಣೆಮಾಡ್ತಾ ಬರಲಾಗುತ್ತಿದೆ.‌ ಕಳೆದ ಮೂರು ವರ್ಷಗಳಿಂದ ನಾಲ್ಕು ಜಿಲ್ಲೆ ಒಂಬತ್ತು ತಾಲೂಕಿನ ರೈತರು ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ನಿರಂತರವಾಗಿ ಹೋರಾಟ ನಡೆಯುತ್ತಿದ್ದಾರೆ. ಆದ್ರೆ ಆಡಳಿತರೂಢ ಸರ್ಕಾರಗಳು ಯೋಜನೆ ಬಗ್ಗೆ ತತ್ಸಾರ ಮನೋಭಾವನೆ ಅನುಸರಿಸುತ್ತಿವೆ ಅಂತಾ ರೈತ ಮುಖಂಡರು ಹಾಗೂ ಮಾಠಾಧೀಶರು ಆಕ್ರೋಶ ವ್ಯಕ್ತಪಡಿಸಿದ್ದಾರೆ..