ಬೀದಿಗೆ ಬಂತು ಸವತಿಯರ ಜಡೆಜಗಳ- ಕೀರ್ತಿಗೂ -ದುನಿಯಾ ವಿಜಿಗೂ ಮದುವೆನೇ ಆಗಿಲ್ಲ ಅಂದ್ರು ನಾಗರತ್ನಾ- ಇದು ವಿಜಯ್ ದುನಿಯಾ ಕತೆ!

ಅತ್ತ ಜಿಮ್​ ಟ್ರೇನರ್​ ಮೇಲೆ ಹಲ್ಲೆ ಮಾಡಿ ನಟ ದುನಿಯಾ ವಿಜಯ್​ ಜೈಲು ಸೇರುತ್ತಿದ್ದಂತೆ ಇತ್ತ ದುನಿಯಾ ವಿಜಯ್ ಮನೆಯಲ್ಲಿ ಸವತಿಯರ ಜಡೆಜಗಳ ಬೀದಿಗೆ ಬಿದ್ದಿದೆ. ವಿಜಯ್ ಎರಡನೇ ಪತ್ನಿ ಕೀರ್ತಿ ಗೌಡ್​ ತನ್ನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಮೊದಲ ಪತ್ನಿ ನಾಗರತ್ನಾ ಆರೋಪಿಸಿದ್ದು, ಗಿರಿನಗರ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೆಲ್ಲಾ ನಾಟಕ ಅಂತ ಎರಡನೇ ಪತ್ನಿ ಕೀರ್ತಿ ಆರೋಪಿಸಿದ್ದಾಳೆ.

 ಹೌದು ನಿನ್ನೆ ದುನಿಯಾ ವಿಜಯ್​ ಜಿಮ್​ ಟ್ರೇನರ್​ ಮೇಲೆ ಹಲ್ಲೆ ನಡೆಸಿದ ವಿಚಾರ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆ ದುನಿಯಾ ವಿಜಯ್ ಮೊದಲ ಪತ್ನಿ ಮಗನನ್ನು ನೋಡಿಕೊಂಡು ಬರಲು ದುನಿಯಾ ವಿಜಯ್ ಹಾಗೂ ಕೀರ್ತಿ ಗೌಡ್ ವಾಸವಾಗಿರುವ ಮನೆಗೆ ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಮಗ ಎಲ್ಲಿ ಎಂದು ಪ್ರಶ್ನಿಸುತ್ತಿದ್ದಂತೆ ಕೀರ್ತಿ ಗೌಡ ಹಲ್ಲೆ ನಡೆಸಿದ್ದಾಳೆ. ಇಬ್ಬರು ಹುಡುಗರಿಂದ ನನ್ನ ಮೇಲೆ ಹಲ್ಲೆ ಮಾಡಿಸಿದ್ದಾಳೆ ಎಂದು ಮೊದಲ ನಾಗರತ್ನಾ ಆರೋಪಿಸಿದ್ದಾರೆ.

 

ಇನ್ನು ಕೀರ್ತಿ ಗೌಡ್ ಹಾಗೂ ದುನಿಯಾ ವಿಜಿ ಬಗ್ಗೆ ಮಾತನಾಡಿದ ನಾಗರತ್ನಾ ಅವರಿಬ್ಬರು ಮದುವೆನೇ ಆಗಿಲ್ಲ. ಆಕೆ ಮಾಸ್ತಿಗುಡಿ ಸ್ಕ್ರಿನ್​ ಟೆಸ್ಟ್​ ಬಂದು ನನ್ನ ಗಂಡನ ಜೀವನದಲ್ಲಿ ಸೇರಿಕೊಂಡಿದ್ದಾಳೆ. ಆಕೆ ಆಸ್ತಿಗಾಗಿ ಇಷ್ಟೆಲ್ಲ ನಾಟಕ ಮಾಡ್ತಿದ್ದಾಳೆ. ಆಕೆಗೂ ನನ್ನ ಗಂಡನಿಗೂ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿದ್ದಾಳೆ. ಅಲ್ಲದೇ ವಿನಾಕಾರಣ ನನ್ನನ್ನು ಟಾರ್ಗೆಟ್ ಮಾಡ್ತಿದ್ದಾರೆ. ನನಗೆ ದುನಿಯಾ ವಿಜಿ ಯಾವುದೇ ಆಸ್ತಿ ನೀಡಿಲ್ಲ ಎಂದು ಕೂಡ ನಾಗರತ್ನಾ ಆರೋಪಿಸಿದ್ದಾಳೆ.

ಇನ್ನು ಮೊದಲ ಪತ್ನಿ ನಾಗರತ್ನಾ ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಎರಡನೇ ಪತ್ನಿ ಕೀರ್ತಿ ಗೌಡ್, ನನಗೆ ನಿನ್ನೆ ನಾಗರತ್ನಾ ನೀಡಿದ ಕಂಪ್ಲೆಂಟ್​ ನೋಡಿ ಬೇಸರವಾಗಿದೆ. ನಮ್ಮ ಮದುವೆಯಾಗಿ ಮೂರು ವರ್ಷವಾಗಿದೆ. ನಾನು ಅವರ ಆರೋಪಗಳ ಬಗ್ಗೆ ಏನು ಮಾತನಾಡಲು ಬಯಸುವುದಿಲ್ಲ. ನನಗೆ ಈಗ ಸಧ್ಯಕ್ಕೆ ಪತಿಯ ಚಿಂತೆಯಾಗಿದೆ. ಅವರು ಮನೆಗೆ ಬಂದ ಮೇಲೆ ಎಲ್ಲದಕ್ಕು ಉತ್ತರ ನೀಡುತ್ತೇನೆ ಎಂದರು.
ಒಟ್ಟಿನಲ್ಲಿ ಇತ್ತ ದುನಿಯಾ ವಿಜಯ್​ ನಿಜಜೀವನದಲ್ಲೂ ಮತ್ತೊಮ್ಮೆ ರೌಡಿಸಂ ಮಾಡಲು ಹೋಗಿ ಜೈಲು ಸೇರಿದ್ದರೇ, ಇತ್ತ ಪತ್ನಿಯರು ಮತ್ತೆ ಸಂಸಾರದ ಜಗಳವನ್ನು ಬೀದಿಗೆ ತಂದಿದ್ದಾರೆ. ಸಿನಿಮಾ ನಟರೊಬ್ಬರ ಬದುಕು ಹೀಗೆ ಅವಾಂತರಗಳಿಂದಲೇ ಸುದ್ದಿಯಾಗ್ತಿರೋದು ಮಾತ್ರ ಅಭಿಮಾನಿಗಳಿಗೆ ನೋವುಂಟು ಮಾಡಿದೆ.