ಮೊದಲು ಹುಂಡಿಗೆ ದುಡ್ಡು ಹಾಕ್ತಿದ್ರು- ಮತ್ತೆ ಅದೇ ಹುಂಡಿಯಲ್ಲಿ ಕದಿತಿದ್ರು-ಇದ್ಯಾರು ಅಂದ್ರಾ ಈ ಸ್ಟೋರಿ ಓದಿ!

 

ಜನರು ತಮಗೆ ಕಷ್ಟ ಬಂದಾಗ, ದೇವಸ್ಥಾನಕ್ಕೆ ಹೋಗಿ ದೇವರೆ ಕಷ್ಟ ಕಡಿಮೆ ಮಾಡು ಅಂತ ಪ್ರಾರ್ಥನೆ ಮಾಡಿ ಹುಂಡಿಗೆ ಕಾಣಿಕೆ ಹಾಕಿ ಬರ್ತಾರೆ. ಆದರೇ ಇಲ್ಲೊಂದು ಖರ್ತನಾಕ್ ಗ್ಯಾಂಗ್​ ದೇವರ ಹುಂಡಿಯಿಂದಲೇ ಹಣ ದೋಚುತ್ತಿದ್ದು, ಅದಕ್ಕೆ ಅವರು ಬಳಸುತ್ತಿದ್ದ ಟೆಕ್ನಿಕ್​ ನೋಡಿದ್ರೆ ನೀವು ಬೆಚ್ಚಿ ಬೀಳ್ತಿರಾ.

 

 

ಹೌದು ದೇವಸ್ಥಾನದ ಹುಂಡಿ ದೋಚೋಕೆ ಹೋಗ್ತಿದ್ದ ತಂಡ, ದೇವಸ್ಥಾನದ ಹುಂಡಿಗೆ ಮೊದಲು 1 ರೂಪಾಯಿ ಕಾಯಿನ್​ ಹಾಕುತ್ತಿತ್ತು. ಆಗ ಹುಂಡಿಯಲ್ಲಿ ದುಡ್ಡು ಇದ್ಯಾ ಇಲ್ವಾ? ಹುಂಡಿ ತುಂಬಿದ್ಯಾ ಎಂಬುದನ್ನೆಲ್ಲ ಚೆಕ್​ ಮಾಡುತ್ತಿದ್ದ ಗ್ಯಾಂಗ್​ ಬಳಿಕ ಕಳ್ಳತನ ಮಾಡಿ ಎಸ್ಕೇಪ್​ ಆಗುತಿತ್ತು.

 


ಮೈಕೋಲೇಔಟ್​ ಪೊಲೀಸರು ಹೀಗೆ ಹುಂಡಿ ಕದಿಯುತ್ತಿದ್ದ ಕಳ್ಳರಾದ ಕುಮಾರ್, ಮಂಜ, ಕೃಷ್ಣ, ವಿಜಯಕುಮಾರ್ ರನ್ನು ಬಂಧಿಸಿದೆ. ಹಗಲಿನಲ್ಲಿ ಈ ತಂಡ ಸ್ಟೌ ರಿಪೇರಿ ಸೋಗಿನಲ್ಲಿ ಏರಿಯಾಗಳಲ್ಲಿ ಸಂಚರಿಸಿ ದೇವಾಲಯಗಳನ್ನು ಹುಡುಕಿಕೊಳ್ಳುತ್ತಿತ್ತು ಎನ್ನಲಾಗಿದೆ.

 

ದೇವಾಲಯವೊಂದಕ್ಕೆ ಕನ್ನ ಹಾಕಲು ಸ್ಕೆಚ್​ ಹಾಕುತ್ತಿದ್ದ ವೇಳೆ ಮೈಕೋಲೇಔಟ್​ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ 3 ಲಕ್ಷ ಮೌಲ್ಯದ 55 ಗ್ರಾಂ ಚಿನ್ನ, 1 ಕೆ,ಜಿ ಬೆಳ್ಳಿ ವಶಪಡಿಸಿಕೊಳ್ಳಾಗಿದೆ. ಇವರ ಬಂಧನದಿಂದ ರಾಜ್ಯದ 17 ದೇವಸ್ಥಾನದ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿದಂತಾಗಿದೆ.