ಫಿಟ್ನೆಸ್ ಚಾಲೆಂಜ್ !! ಮೋದಿಗೆ ಉತ್ತರ ನೀಡಿದ ಗೌಡರು !! ಯಾರ‌್ಯಾರ ಯೋಗಾಯೋಗಾ ಹೇಗಿತ್ತು ಗೊತ್ತಾ ? —–

ಇಂದು ದೇಶದೆಲ್ಲೆಡೆ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಇತಿಚ್ಚೆಗೆ ಪ್ರಧಾನಿ ನರೇಂದ್ರ ಮೋದಿ ಹಾಕಿದ್ದ ಫಿಟ್ನೆಸ್ ಚಾಲೆಂಜ್ ಗೆ ಕೆಲವರು ಇವತ್ತು ಉತ್ತರ ನೀಡಿದ್ರೆ ಇನ್ನು ಕೆಲವರು ತಮ್ಮ ಫಿಟ್ನೆಸ್ ಸಾಭೀತು ಮಾಡಲು ಹೆಣಗಾಡಿದರು.ಯೋಗ ದಿನಾಚರಣೆ ಹಿನ್ನೆಲೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆಯನ್ನು ಸಜ್ಜುಗೊಳಿಸಲಾಗಿತ್ತು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಯೋಗ ಮಾಡಲು ಚೇಂಬರ್ ಆಫ್ ಕಾಮರ್ಸ್ ಆಹ್ವಾನಿಸಿತ್ತು. ಆದರೆ ದೇವೇಗೌಡರು ಮೋದಿಯವರ ಫಿಟ್ನೆಸ್ ಚಾನೆಲ್ ಗೆ ಉತ್ತರ ನೀಡಲಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಚೇಂಬರ್ ಆಫ್ ಕಾಮರ್ಸ್ ಸದ್ದಿಲ್ಲದೆ ಜಾಗ ಖಾಲಿ ಮಾಡಿದೆ. ಕೊನೆಗೆ ದೇವೇಗೌಡರು ತಮ್ಮ ನಿವಾಸದಲ್ಲೇ ಯೋಗ ಪಟ್ಟುಗಳನ್ನ ಪ್ರದರ್ಶಿಸಿದರು.ಪ್ರತಿನಿತ್ಯ 2 ಗಂಟೆ ಯೋಗ ಮಾಡುವ ದೇವೇಗೌಡ್ರು ಮೋದಿಯ ಫಿಟ್ನೆಸ್ ಚಾಲೆಂಜ್ ಅಕ್ಸೆಪ್ಟ್ ಮಾಡಿದ್ದಾರೆ. ಹೀಗಾಗಿ ಇಂದು ಬಹಿರಂಗವಾಗಿಯೇ ಯೋಗ ಪ್ರದರ್ಶನ ಮಾಡಿದರು. ಇನ್ನು ನಗರದ ಹಲವೆಡೆ ರಾಜಕೀಯ ನಾಯಕರು ಯೋಗ ಮಾಡಿದ್ದು, ಕಂಠೀರವ ಕ್ರೀಡಾಂಗಣ, ಕಸ್ತೂರ ಭಾ ರಸ್ತೆ, ಮಲ್ಯ ರಸ್ತೆ, ಸೇರಿದಂತೆ ಹಲವೆಡೆ ಸಂಚಾರ ನಿಷೇಧಿಸಲಾಗ್ತಿದೆ.ರಾಜ್ಯ ಬಿಜೆಪಿ ಕಚೇರಿಯಲ್ಲಿ ನಾಲ್ಕನೇ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಮಹಿಳಾ‌ ಘಟಕದ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಮಂಜುಳಾ‌ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಯುವ ಸಮೂಹದ ಜೊತೆ ನಾಯಕರು ಸೂರ್ಯನಮಸ್ಕಾರ,ಪ್ರಾಣಯಾಮ ಸೇರಿದಂತೆ ಯೋಗಾಸನದ ವಿವಿಧ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ಯೋಗ ದಿನಾಚರಣೆಯನ್ನು ಆಚರಿಸಿದರು. ಇಳಿ ವಯಸ್ಸಿನಲ್ಲಿಯೂ ಯುವ ಸಮೂಹದೊಂದಿಗೆ ಯೋಗದಲ್ಲಿ ತೊಡಗಿಕೊಂಡು ಗಮನ ಸೆಳೆದರು. ಹಲವು ಕ್ಲಿಷ್ಟಕರ ಭಾಗಿ ಗಳ ಇವ ವಯಸ್ಸಿನ ಅಡ್ಡಿ ಎದುರಾದರೂ ಸಾವರಿಸಿಕೊಂಡು ಯೋಗವನ್ನು ಪ್ರದರ್ಶಿಸಿ ಯುವಕರಿಗೆ ಸ್ಪೂರ್ತಿ ನೀಡಿದರು.ಯೋಗ ಪ್ರದರ್ಶನದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪ, ಸ್ವಾಮಿ ವಿವೇಕಾನಂದರು ಹೇಳಿದಂತೆ ಯೋಗ ಮನಸ್ಸನ್ನು ಶಕ್ತಿಯುತ ಹಾಗು ಶಿಸ್ತುಬದ್ದಗೊಳಿಸಲಿದೆ, ಯೋಗ ಕೇವಲ ದೈಹಿಕ ವ್ಯಾಯಾಮ ಮಾತ್ರವಲ್ಲ, ಶರೀರ,ಬುದ್ದಿ,ಮನಸ್ಸು ಸಮತೋಲನ ಸಾಧಿಸುವ ಜೀವನ ವಿಧಾನವಾಗಿದೆ, ನಮ್ಮಲ್ಲಿನ ಶಕ್ತಿಯನ್ನು ಕಂಡುಕೊಳ್ಳುವುದೇ ಯೋಗ, ಪುರಾತತ ಯೋಗ ಪದ್ದತಿ ನಮ್ಮ ದೇಶದ ಹೆಮ್ಮೆಯಾಗಿದೆ ಎಂದರು.ದೇಹ ದೇವಾಲಯವಿದ್ದಂತೆ ಅದನ್ನು ಶುದ್ದಿಯಾಗಿಟ್ಟುಕೊಳ್ಳಯವುದೇ ಯೋಗ, ಯೋಗ ಇಂದು ಜಾಗತಿಕ ಮನ್ನಣೆ ಪಡೆದಿದೆ, ಅಂತಾರಾಷ್ಟ್ರೀಯ ಯೋಗ ದಿನ ಎಂದು ವಿಶ್ವಸಂಸ್ಥೆ ಘೊಷಿಸಿದೆ, ಇದರ ಯಶಸ್ಸು ಮೋದಿಗೆ ಸಲ್ಲಬೇಕು.ಯೋಗ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡುವ ಅಗತ್ಯವಿದೆ, ದೈಹಿಕ ಮಾನಸಿಕ ಸದೃಡೆತೆ ಬೆಳೆಸಿಕೊಳ್ಳಬೇಕು,ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗಬೇಕು,ಯೋಗ ದಿನಕ್ಕ ಯೋಗಾಸನ ಮಾಡುವುದು ಸೀಮಿತವಾಗದ ಯೋಗ ನಮ್ಮ ಬದುಕಿನ ದೈನಂದಿನ ಕ್ರಿಯೆ, ಅವಿಭಾಜ್ಯ ಅಂಗವಾಗಬೇಕು, ಪ್ರತಿದಿನವು ಯೋಗದಿನದಿಂದ ಕೂಡಿರಲಿ‌ ಎಂದು ಕರೆ ನೀಡಿದರು.