ದ್ರಾವಿಡಹೋರಾಟದ ನಿಧಿ ಇನ್ನಿಲ್ಲ- ಕಳಚಿತು ಕರುಣೆಯ ಕೊಂಡಿ- ಅಯ್ಯನ ಕಳೆದುಕೊಂಡು ಅನಾಥವಾದ ತಮಿಳುನಾಡು!

 

adದಶಕಗಳ ತಮಿಳುನಾಡಿನ ನಾಡಿಮಿಡಿತ ಅರಿತು ರಾಜಕಾರಣ ನಡೆಸಿದ, ಹಲವು ಹೋರಾಟಗಳ ಹರಿಕಾರರಾಗಿ ದ್ರಾವಿಡ್ ನಿಧಿ ಎಂದೇ ಕರೆಸಿಕೊಂಡಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ನಿಧನರಾಗಿದ್ದಾರೆ. 94 ವರ್ಷ ವಯಸ್ಸಿನಲ್ಲಿ ವಯೋಸಹಕ ಅನಾರೋಗ್ಯದಿಂದ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದ ಕರುಣಾನಿಧಿ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದು, ಹಿರಿಯ ರಾಜಕೀಯ ಮುತ್ಸದ್ದಿ ನಿಧನದಿಂದ ಡಿಎಂಕೆ ಪಕ್ಷ ಹಾಗೂ ತಮಿಳುನಾಡು ಅನಾಥವಾಗಿದೆ ಎಂದು ಬಣ್ಣಿಸಲಾಗುತ್ತಿದೆ.
ತಮ್ಮ 14 ನೇ ವಯಸ್ಸಿಗೆ ರಾಜಕಾರಣಕ್ಕೆ ಧುಮುಕಿದ್ದ ಕರುಣಾನಿಧಿ, 11 ಭಾರಿ ಶಾಸಕರಾಗಿ 5 ಭಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.ಕರುಣಾನಿಧಿ ನಿಧನಕ್ಕೆ ತಮಿಳುನಾಡಿನಾದ್ಯಂತ 7 ದಿನಗಳ ಶೋಕಾಚರಣೆ ಘೋಷಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಕರುಣಾನಿಧಿ ಅಂತಿಮ ದರ್ಶನ ಪಡೆಯಲಿದ್ದಾರೆ.

ಇನ್ನು ತಮಿಳುನಾಡಿನ ಜನತೆಯ ಪಾಲಿಗೆ ಪ್ರಾತಃಸ್ಮರಣಿಯರಾಗಿದ್ದ ಕರುಣಾನಿಧಿ ನಿಧನದಿಂದ ತಮಿಳುನಾಡು ಶೋಕದಲ್ಲಿ ಮುಳುಗಿದ್ದು, ಸ್ವಯಂಪ್ರೇರಿತರಾಗಿ ತಮಿಳುನಾಡಿನ ಜನತೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಲಕ್ಷೋಪಾಧಿ ಸಂಖ್ಯೆಯಲ್ಲಿ ಅಭಿಮಾನಿಗಳು ಕರುಣಾನಿಧಿ ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದು, ಸೂಕ್ತ ಬಿಗಿಭದ್ರತೆ ಕೈಗೊಳ್ಳಲಾಗಿದೆ.
ಇನ್ನು ಕರ್ನಾಟಕದಲ್ಲೂ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಹಲವು ರಾಜಕೀಯ ನಾಯಕರು, ಸಚಿವರು, ಮಠಾಧೀಶರು ಕರುಣಾನಿಧಿ ನಿಧನಕ್ಕೆ ಸಂತಾಪ ಸೂಚಿಸಿದ್ದು, ಮುಂಜಾಗ್ರತಾ ಕ್ರಮವಾಗಿ ತಮಿಳರು ಹೆಚ್ಚಾಗಿರುವ ಪ್ರದೇಶದಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.