ದಕ್ಷಿಣಾಮೂರ್ತಿಯಿಂದ ಕರುಣಾನಿಧಿಯವರೆಗೂ- ಇದು ಸೋಲಿಲ್ಲದ ಸರದಾರನ ಕತೆ!

 

ಬದುಕಿದ್ದಾಗಲೇ ದಂತಕತೆಯಂತಿದ್ದ ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡಿನ ಸೂರ್ಯ ಎಂದೇ ಕರೆಸಿಕೊಂಡಿದ್ದ ದಕ್ಷಿಣಾಮೂರ್ತಿ ಅಲಿಯಾಸ್ ಮುತ್ತುವೇಲು ಕರುಣಾನಿಧಿ ನಿಧನರಾಗಿದ್ದಾರೆ. ಆ ಮೂಲಕ ಜೀವನದುದ್ದಕ್ಕೂ ತಮಿಳರ ಹಿತಕ್ಕಾಗಿ ದುಡಿದ ಧ್ವನಿಯೊಂದು ಶಾಂತವಾದಂತಾಗಿದೆ.
ಜೂನ್ 3. 1924 ರಲ್ಲಿ ತಮಿಳುನಾಡಿನ ತಿರುಕ್ಕುವಲೈ ನಲ್ಲಿ ತಿರು ಮುತುವೇಳರ್, ತಿರುಮತಿ ಅಂಜುಗಂ ದಂಪತಿ ಪುತ್ರನಾಗಿ ಜನಿಸಿದ ದಕ್ಷಿಣಾಮೂರ್ತಿ ಇಸೈವೆಳ್ಳಲಾರ್​​ ಸಮುದಾಯಕ್ಕೆ ಸೇರಿದವರು. ತಮ್ಮ 14 ನೇ ವಯಸ್ಸಿನಲ್ಲಿ ಅಳಗಿರಿ ಸ್ವಾಮಿ ಭಾಷಣದಿಂದ ಪ್ರೇರಿತರಾಗಿ ರಾಜಕಾರಣಕ್ಕೆ ಧುಮುಕಿದ್ದ ಕರುಣಾನಿಧಿ ತಮಿಳುನಾಡಿನ ಕುಳಿತಲೈ ವಿಧಾನಸಭಾ ಕ್ಷೇತ್ರದಿಂದ ಮೊದಲ ಭಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದರು. ದಾಲ್ಮಿಯಾಪುರಂ ರೈಲ್ವೆ ನಿಲ್ದಾಣದ ಹೆಸರು ಬದಲಾಯಿಸುವ ಚಳುವಳಿಯಲ್ಲಿ ಸಕ್ರಿಯರಾಗಿದ್ದಕ್ಕೆ ಜೈಲುವಾಸ ಅನುಭವಿಸಿದ ಕುರಣಾನಿಧಿ ಸದಾಕಾಲ ಎಡಪಂಥೀಯ ವಿಚಾರಧಾರೆಗಳಿಂದಲೇ ಸುದ್ದಿಯಾದವರು.

ಶ್ರೀರಾಮ ಸೇತುವೆ ನಿರ್ಮಿಸಿದ್ದ ಎಂಬುದನ್ನು ನಿರಾಕರಿಸಿದ್ದ ಕರುಣಾನಿಧಿ, ಶ್ರೀರಾಮ ಇಂಜೀನಿಯರ್ರಾ? ಎಂದು ಪ್ರಶ್ನಿಸಿ ಲೇವಡಿ ಮಾಡಿದ್ದರು. ರಾಜಕಾರಣದಷ್ಟೇ ರಸವತ್ತಾದ ವೈಯಕ್ತಿಕ ಬದುಕನ್ನು ಹೊಂದಿದ್ದ ಪದ್ಮಾವತಿ,ದಯಾಳು ಹಾಗೂ ರಾಜಥಿಅಮ್ಮಾಳನ್ನು ವರಿಸಿದ್ದರು. ಅದರಲ್ಲೂ ಮೂರನೇ ಪತ್ನಿ ರಾಜಥಿ ಅಮ್ಮಾಳ್ ಬಗೆಗೆ ಕರುಣಾನಿಧಿಯವರಿಗೆ ವಿಶೇಷ ಪ್ರೀತಿಇತ್ತು.
ಎಂ. ಕೆ. ಮುತ್ತು, ಎಂ. ಕೆ. ಅಳಗಿರಿ, ಎಂ. ಕೆ. ಸ್ಟಾಲಿನ್, ಎಂ.ಕೆ ತಮಿಳರಸು, ಎಂ.ಕೆ ಸೆಲ್ವಿ, ಎಂ. ಕೆ ಕನಿಮೋಳಿ ಕರುಣಾನಿಧಿ ಮಕ್ಕಳು. 1957ರಲ್ಲಿ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದ ಕರುಣಾನಿಧಿ ಅಳಗಿರಿ ಸ್ವಾಮಿ ಭಾಷಣದಿಂದ ಪ್ರೇರಿತರಾಗಿ ರಾಜಕೀಯ ಪ್ರವೇಶ ಮಾಡಿದ್ದರು. 1961ರಲ್ಲಿ ಡಿಎಂಕೆ ಪಕ್ಷದ ಕೋಶಾಧಿಕಾರಿಯಾಗಿ ಅಧಿಕಾರ ನಡೆಸಿದ ಕರುಣಾನಿಧಿ, 1962 ರಲ್ಲಿ ರಾಜ್ಯ ವಿಧಾನಸಭೆಯ ವಿರೋಧಪಕ್ಷದ ಉಪನಾಯಕನಾಗಿ ಆಯ್ಕೆಯಾದರು. 1967ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದಾಗ ಲೋಕೋಪಯೋಗಿ ಇಲಾಖೆ ಮಂತ್ರಿಯಾಗಿದ್ದರು. ಸ್ಪರ್ಧಿಸಿದ ಪ್ರತೀ ಚುನಾವಣೆಯಲ್ಲೂ ಗೆಲುವನ್ನೇ ಕಂಡ ಕರುಣಾನಿಧಿ, ಸಂಸ್ಥಾಪಕ ಸಿ.ಎನ್.ಅಣ್ಣಾದೊರೆ ನಿಧನದ ಬಳಿಕ ನಾಯಕರಾಗಿ ಡಿಎಂಕೆ ಪಕ್ಷವನ್ನು ಮುನ್ನಡೆಸಿದರು.

 

1969ರಲ್ಲಿ ಮೊದಲ ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿ ಆಯ್ಕೆಯಾದ ಕರುಣಾನಿಧಿ, ಐದು ಭಾರಿ ಸಿಎಂ ಆಗಿ ತಮಿಳರ ಸೇವೆ ಮಾಡಿದರು. ಕಾವೇರಿ ವಿವಾದದ ವೇಳೆ ಮದ್ರಾಸ್​ ಫೇವರಿಸಂ ಬಳಸಿ ನೀರು ಬಳಸಿಕೊಂಡರು ಎಂಬುದನ್ನು ಸೇರಿದಂತೆ ಹಲವು ಆರೋಪಗಳಿದ್ದರೂ ಸದಾಕಾಲ ತಮಿಳರಿಗಾಗಿ ದುಡಿದ ಮನಸ್ಸು ಕರುಣಾನಿಧಿಯವರದ್ದು.
ಜಯಲಲಿತಾ ರಾಜಕಾರಣದ ಓಘಕ್ಕೆ ಕೆಲವೊಮ್ಮೆ ಹಲವು ಏರಿಳಿತಗಳನ್ನು ಕಂಡರೂ ಯಾವುದಕ್ಕೂ ತಲೆಬಾಗದೇ ಧೀಮಂತವಾಗಿ ರಾಜಕಾರಣವನ್ನು ನಡೆಸಿದ ಶ್ರೇಯಸ್ಸು ಕರುಣಾನಿಧಿಗೆ ಸಲ್ಲುತ್ತದೆ. ಪುತ್ರರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡಿದ್ದರೂ, ಕರುಣಾನಿಧಿಯವರಿಗೆ ಪುತ್ರಿ ಕನಿಮೋಳಿ ಬಗ್ಗೆ ವಿಶೇಷವಾದ ಪ್ರೀತಿ ಇತ್ತು. ಹೀಗಾಗಿ ಕನಿಮೋಳಿ ಜೈಲುವಾಸದ ವೇಳೆ ದುಃಖಕ್ಕಿಡಾಗಿದ್ದರು.
ರಾಜಕಾರಣದಲ್ಲಿ ಎಂದೂ ಸೋಲನ್ನೆ ಕಾಣದಂತೆ ಬದುಕಿನ ಕರುಣಾನಿಧಿ ವಯೋಸಹಜವಾಗಿ ಆವರಿಸಿದ್ದ ಅನಾರೋಗ್ಯದ ವಿರುದ್ಧ ಹೋರಾಟದಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಲಿಲ್ಲ.