ಇನ್ಮುಂದೇ ಎಲ್ಲೆಂದರಲ್ಲಿ ಸ್ಮೋಕ್​ ಮಾಡುವಂತಿಲ್ಲ- ದಮ್​ ಮಾರೋ ದಮ್​ ಗೆ ಬಿತ್ತು ಕಡಿವಾಣ!

 

ad


ಬೇಜಾರಾಗಿದೆ ಅಂತ ವೀಕೆಂಡ್​ನಲ್ಲಿ ಬಾರ್,ಪಬ್​,ಹೊಟೇಲ್​ಗಳಿಗೆ ಹೋಗೋ ನೀವು ಎಲ್ಲೆಂದರಲ್ಲಿ ಕೂತು ಸಿಗರೇಟು ಸೇದುವಂತಿಲ್ಲ. ಅಷ್ಟೇ ಅಲ್ಲ ಎಲ್ಲೆಂದರಲ್ಲಿ ಧಮ್​ ಎಳೆದು ರಿಲ್ಯಾಕ್ಷ್ ಆಗುವಂತಿಲ್ಲ. ಯಾಕೇ ಅಂದ್ರಾ ಎಲ್ಲ ಹೊಟೇಲ್, ಕ್ಲಬ್​,ಪಬ್,ಬಾರ್,ರೆಸ್ಟೋರೆಂಟ್​ಗಳಲ್ಲಿ ಧೂಮಪಾನ್​ಕ್ಕೆ ಪ್ರದೇಶ ನಿಗದಿಯನ್ನು ಕಡ್ಡಾಯಗೊಳಿಸಿ ಬಿಬಿಎಂಪಿ ಆದೇಶಿಸಿದೆ.
ಪರೋಕ್ಷ ಧೂಮಪಾನದಿಂದ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಂಬಾಕು ನಿಯಂತ್ರಣ ಉನ್ನತ ಮಟ್ಟದ ಸಮಿತಿ ಸದಸ್ಯ ಡಾ.ವಿಶಾಲ್​​ ರಾವ್​​ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬಿಬಿಎಂಪಿ ಪಾಲಿಕೆ ಸಭೆಯಲ್ಲಿ ಅವರು ಮಾಹಿತಿ ನೀಡಿದ್ದು, 30ಕ್ಕಿಂತ ಹೆಚ್ಚು ಆಸನ ವ್ಯವಸ್ಥೆಯಿರುವ ಬಾರ್​, ರೆಸ್ಟೋರೆಂಟ್, ಹೋಟೆಲ್, ಪಬ್​​ ಮತ್ತು ಕ್ಲಬ್​​ಗಳಲ್ಲಿ ಪ್ರತ್ಯೇಕ ಧೂಮಪಾನ ಪ್ರದೇಶ ಸ್ಥಾಪಿಸಬೇಕು ಎಂದು ಪಾಲಿಕೆಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಒಂದು ವೇಳೆ ಧೂಮಪಾನ ಪ್ರದೇಶವನ್ನು ಸ್ಥಾಪನೆ ಮಾಡದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದು, ಉದ್ದಿಮೆ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಬಿಬಿಎಂಪಿ ಸುತ್ತೋಲೆಯಲ್ಲಿ ಖಡಕ್​ ಎಚ್ಚರಿಕೆ ನೀಡಲಾಗಿದೆ.ಹೀಗಾಗಿ ಇನ್ಮುಂದೆ ಬಾರ್,ಪಬ್.ಕ್ಲಬ್​ಗಳು ಸ್ಮೋಕಿಂಗ್​​ಗೆ ಜೋನ್​ ನಿರ್ಮಿಸುವುದು ಅನಿವಾರ್ಯವಾಗಿದೆ. ಇದರಿಂದ ಫ್ಯಾಸಿವ್​ ಸ್ಮೋಕರ್​ ಗಳು ಸಂಕಷ್ಟಕ್ಕೊಳಗಾಗುವುದನ್ನು ತಪ್ಪಿಸಬಹುದಾಗಿದೆ.