ನಗರದ ನೂತನ ಮೇಯರ್​ ಆಗಿ ಗಂಗಾಂಬಿಕಾ ಮಲ್ಲಿಕಾರ್ಜುನ್- ಕಸದ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಪ್ರಯತ್ನ ಅಂದ್ರು ಗಂಗಾಂಬಿಕಾ!

ಕಾಂಗ್ರೆಸ್​ ಪಾಳಯದಲ್ಲೇ ಅಂತಃಕಲಹಕ್ಕೆ ಕಾರಣವಾಗಿದ್ದ ಬಿಬಿಎಂಪಿ ಮೇಯರ್ ಆಯ್ಕೆ ಪ್ರಕ್ರಿಯೆ ಕೊನೆಗೂ ಸುಖಾಂತ್ಯಗೊಂಡಿದ್ದು, ಒಕ್ಕಲಿಗರಿಗೆ ಮೇಯರ್​ ಪಟ್ಟ ಸಿಗಬೇಕೆಂಬ ಆಗ್ರಹದ ನಡುವೆಯೇ ನಗರದ 52 ನೇ ಮೇಯರ್​ ಆಗಿ ಜಯನಗರ ವಾರ್ಡನ್​​ ಕಾಂಗ್ರೆಸ್​ ಕಾರ್ಪೋರೇಟರ್​ ಗಂಗಾಂಬಿಕಾ ಮಲ್ಲಿಕಾರ್ಜುನ್​ ಮೇಯರ್​ ಆಗಿ ಆಯ್ಕೆಗೊಂಡಿದ್ದಾರೆ. ನಿನ್ನೆ ಮಧ್ಯರಾತ್ರಿಯವರೆಗೂ ಕಾಂಗ್ರೆಸ್​ನಲ್ಲಿ ಮೇಯರ್ ಅಭ್ಯರ್ಥಿ ಆಯ್ಕೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಬಳಿಕ ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಬೆಂಬಲಿತ ಅಭ್ಯರ್ಥಿ ಗಂಗಾಂಬಿಕಾ ಮಲ್ಲಿಕಾರ್ಜುನ್ ನಗರದ ಪ್ರಥಮ ಪ್ರಜೆಯಾಗಿ ಚುನಾಯಿತರಾಗಿದ್ದಾರೆ. ಉಪಮೇಯರ್ ಆಗಿ, ಜೆಡಿಎಸ್​ನ ರಮೀಳಾ ಆಯ್ಕೆಯಾಗಿದ್ದಾರೆ.

ad

130 ಮತಗಳನ್ನು ಪಡೆದು ಗಂಗಾಬಿಕಾ ಮಲ್ಲಿಕಾರ್ಜುನ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಆಯ್ಕೆ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನೂತನ ಮೇಯರ್ ಗಂಗಾಂಬಿಕಾ ನಗರದಅ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಹಾಗೂ ಎಲ್ಲರ ಸಹಕಾರದಿಂದ ಕಸ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ. ಒಟ್ಟಿನಲ್ಲಿ ಕೊನೆಗೂ ಮತ್ತೊಮ್ಮೆ ಬಿಬಿಎಂಪಿ ಅಧಿಕಾರ ಮೈತ್ರಿ ಸರ್ಕಾರದ ಕೈ ಸೇರಿದಂತಾಗಿದೆ.