ನಮ್ಮ ಮೆಟ್ರೋಗೆ ಪ್ರಯಾಣಿಕರಿಗೆ ಗಿಫ್ಟ್​​-ಪರ್ಪಲ್​ ಮಾರ್ಗದಲ್ಲಿ ಮತ್ತೊಂದು ಟ್ರೇನ್!

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಇವತ್ತು ಮತ್ತೊಂದು ಗಿಫ್ಟ್​ ಸಿಕ್ಕಿದೆ. 6 ಬೋಗಿಗಳ ಮತ್ತೊಂದು ಮೆಟ್ರೋ ರೈಲು ಸಂಚಾರಕ್ಕೆ ಸಿಎಂ ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಮೆಜೆಸ್ಟಿಕ್​​​​ ರೈಲು ನಿಲ್ದಾಣದಲ್ಲಿ ಸಿಎಂ ಕುಮಾರಸ್ವಾಮಿ ಹೊಸ ರೈಲಿಗೆ ಚಾಲನೆ ನೀಡಿದ್ರು. ಈ ರೈಲು ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಗೆ ಸಂಚರಿಸಲಿದೆ.

ad

ಇದರೊಂದಿಗೆ ಪರ್ಪಲ್​​ ಮಾರ್ಗದಲ್ಲಿ 6 ಬೋಗಿಯ ಎರಡನೇ ರೈಲು ಸಂಚಾರ ಆರಂಭ ಮಾಡಿದಂತಾಗಿದೆ.ಇನ್ನು ಮೆಟ್ರೋ ನಿಲ್ದಾಣದಿಂದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಗೆ ಸಿಎಂ ಇದೇ ವೇಳೆ ಚಾಲನೆ ನೀಡಿದ್ರು. ಡಿಸಿಎಂ ಪರಮೇಶ್ವರ್, ಸಾರಿಗೆ ಸಚಿವ ಡಿಸಿ ತಮ್ಮಣ್ಣ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಕೆಂಪೇಗೌಡ ಮೆಟ್ರೋ ಸ್ಟೇಷನ್‌ನ ಮೂರನೇ ಗೇಟನ್ನೂ ಸಿಎಂ ಉದ್ಘಾಟಿಸಿದ್ರು.ಆರು ಬೋಗಿ ರೈಲು ಸೇರಿ ವಿವಿಧ ಸೌಕರ್ಯಗಳಿಗೆ ಚಾಲನೆ ನೀಡಿದ ಸಿಎಂ ಕುಮಾರಸ್ವಾಮಿ ಅವ್ರು ಮೆಜೆಸ್ಟಿಕ್​​​ನಿಂದ ನಾಗಸಂದ್ರದ ಕಡೆಗೆ ರೈಲಿನಲ್ಲಿ ಸಂಚಾರ ಮಾಡಿದ್ರು.