ಅಭಿಮಾನಿಗಳ ‘ಗೋ ಬ್ಯಾಕ್’ ಅಭಿಯಾನಕ್ಕೆ ಮಣಿಯುತ್ತಾರಾ ದರ್ಶನ್..ಯಶ್..?

ಮಂಡ್ಯ ಲೋಕಸಭಾ ಕ್ಷೇತ್ರ ಈಗಾಗಲೇ ಸಾಕಷ್ಟು ಗೊಂದಲಗಳ ಹಂದರವಾಗಿದ್ದು ಸುಮಲತಾ ಅಂಬರೀಶ್ ಪರ ಯಾವ ಪಕ್ಷ ನಿಲ್ಲುತ್ತೆ..? ಸ್ಯಾಂಡಲ್ ವುಡ್ ಸಪೋರ್ಟ ಕೊಡುತ್ತಾ..? ಜನಸಾಮಾನ್ಯರು ಸುಮಲತಾರ ಕೈ ಹಿಡಿತಾರಾ..? ಎಂಬಲ್ಲ ರಾಜಕೀಯ ಆಯಾಮಗಳು ದಿನೇ ದಿನೇ ಹೊಸತೊಂದು ರೂಪ ಪಡಿತಾ ಇದೆ. ಈ ಹಿಂದೆ ಸುಮಲತಾ ಪರ ಸ್ಯಾಂಡಲ್ ವುಡ್ ತಾರೆಯರಾದ ದರ್ಶನ್ ಹಾಗೂ ಯಶ್  ಪ್ರಚಾರಕ್ಕಿಳಿಯುವುದಾಗಿ ಸುದ್ದಿಯಾಗಿತ್ತು. ಆದ್ರೆ ಈಗ ಮಂಡ್ಯದಲ್ಲಿ ದರ್ಶನ್ ಹಾಗೂ ಯಶ್ ಪರ ಎಡಿಎಸ್ ಕಾರ್ಯಕರ್ತರು ತಿರುಗಿಬಿದ್ದಿದ್ದಾರೆ.

ನಟರಾಗಿ ಅಭಿಮಾನ ಇದೆ ಆದರೆ ಮಂಡ್ಯದ ರಾಜಕೀಯಕ್ಕೆ ಮದ್ಯ ಪ್ರವೇಶಿಸಬೇಡಿ.. ಎಂಬ ಅಜೆಂಡಾ ಹಿನ್ನೆಲೆಯಲ್ಲಿ ” ಗೋ ಬ್ಯಾಕ್ ಟು ಸ್ಯಾಂಡಲ್ ವುಡ್ ” ಅಭಿಯಾನ ನಡೆಸುವುದಾಗಿ ಹೇಳಿದ್ದಾರೆ.

ಈಗ ಮಂಡ್ಯದಿಂದ ಜೆಡಿಎಸ್​ ಅಭ್ಯರ್ಥಿಯಾಗಿ ನಿಖಿಲ್ ಸ್ಪರ್ಧಿಸುವುದು ಖಚಿತವಾಗಿದ್ದು ಸುಮಲತಾ ಪಕ್ಷೇತರವಾಗಿ ನಿಲ್ತಾರಾ..? ಬಿಜೆಪಿ ಮೊರೆ ಹೋಗ್ತಾರಾ ಅನ್ನೋದು ಇನ್ನು ಸ್ಪಷ್ಟವಾಗಿಲ್ಲ. ಆದರೂ ಸುಮಲತಾ ಪ್ರಚಾರದಲ್ಲಿ ತುಡಗಿಕೊಂಡಿದ್ದಾರೆ.

ಇಂದು ಮಂಡ್ಯದಲ್ಲಿ ಜೆಡಿಎಸ್​ ಬೃಹತ್​ ಸಮಾವೇಶ ಏರ್ಪಡಿಸಲಾಗಿದ್ದು, ನಿಖಿಲ್ ಕುಮಾರಸ್ವಾಮಿ ಅವರನ್ನು ದೇವೇಗೌಡರು ಮೈತ್ರಿ ಅಭ್ಯರ್ಥಿಯನ್ನಾಗಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಆದರೆ, ಇದೇ ದಿನ ಸುಮಲತಾ ಕೂಡ ಮಂಡ್ಯದ ಮೇಲುಕೋಟೆ ಭಾಗದಲ್ಲಿ ಮಗ ಅಭಿಷೇಕ್​ ಜೊತೆಗೆ ಪ್ರಚಾರ ನಡೆಸಲಿದ್ದಾರೆ. ​ ಸಮಾವೇಶದಲ್ಲಿ ಜೆಡಿಎಸ್​ ಕಾರ್ಯಕರ್ತರ ಜೊತೆಗೆ ನಿಖಿಲ್ ಮೈತ್ರಿ ಅಭ್ಯರ್ಥಿಯಾಗಿರುವುದರಿಂದ ಕಾಂಗ್ರೆಸ್​ ಕಾರ್ಯಕರ್ತರೂ ಭಾಗವಹಿಸುವ ಸಾಧ್ಯತೆಯಿದೆ. ಹೀಗಿರುವಾಗ ಇಂದೇ ಸುಮಲತಾ ಕೂಡ ಪ್ರಚಾರ ನಡೆಸುತ್ತಿದ್ದಾರೆ.