ಚಾಮುಂಡಿ ದರ್ಶನಕ್ಕೆ ಇ-ಟಿಕೇಟ್ ಹೆಸರಲ್ಲೂ ಗೋಲ್​ಮಾಲ್​- ಬರೋಬ್ಬರಿ 8 ಲಕ್ಷ ಲೂಟಿ ಮಾಡಿದ ಪಾರುಪತ್ತೇಗಾರ!

 

ad

ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿ ತಾಯಿಯ ಸನ್ನಿಧಿಯಲ್ಲೇ ಲಕ್ಷ ಲಕ್ಷ ಗೋಲ್ಮಾಲ್​ ನಡೆಸಿರೋದು ಬಹಿರಂಗವಾಗಿದೆ. ಚಾಮುಂಡಿ ತಾಯಿಯ ವಿಶೇಷ ದರ್ಶನಕ್ಕಾಗಿ ನೀಡುವ ಇ-ಟಿಕೆಟ್ ವಿತರಣೆಯಲ್ಲಿ ದೇವಸ್ಥಾನ ಪಾರು ಪತ್ತೇಗಾರ ಎಂ.ಡಿ. ರಾಜು ಲಕ್ಷ ಲಕ್ಷ ಗುಳಂ ಮಾಡಿ ಸಿಕ್ಕಿಬಿದ್ದಿದ್ದಾನೆ.

ದೇವರ ವಿಶೇಷ ದರ್ಶನಕ್ಕಾಗಿ 2018ರ ಇ-ಟಿಕೆಟ್​ ಬದಲು 2008ನೇ ಸಾಲಿನ ಟಿಕೆಟ್​ಗಳನ್ನು ಏಪ್ರಿಲ್​ ತಿಂಗಳಿಂದ ಇದುವರೆಗೂ ವಿತರಿಸಿ ಬರೋಬ್ಬರಿ 8 ಲಕ್ಷ ರೂಪಾಯಿ ಲೂಟಿ ಹೊಡೆದಿದ್ದಾನೆ. ಅಕ್ರಮ ನಡೆದು ಐದು ದಿನ ಕಳೆದ್ರೂ ದೇವಾಲಯದ ಆಡಳಿತ ಮಂಡಳಿ ಮಾತ್ರ ಯಾವ ಕ್ರಮವನ್ನೂ ಜರುಗಿಸಿಲ್ಲ.

 

 

ಅಕ್ರಮದ ಬಗ್ಗೆ ಭಕ್ತರು ದೂರು‌ ನೀಡಿದ ಬಳಿಕ ಎಚ್ಚೆತ್ತ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದ 8 ಲಕ್ಷ ರೂಪಾಯಿಯನ್ನು ದೇವಾಲಯದ ನಿಧಿಗೆ ತರಾತುರಿಯಲ್ಲಿ ಜಮೆ ಮಾಡಿಸಿ ಅಕ್ರಮ‌ ಮುಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಒಟ್ಟಿನಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಭಕ್ತರ ದೇಣಿಗೆ ಅಕ್ರಮದ ಪಾಲಾಗ್ತಿದೆ.