ಸರ್ಕಾರ ಸುಭದ್ರವಾಗಿದೆ- ಸುಮ್ಮನೆ ಗೊಂದಲ ಸೃಷ್ಟಿಸಬೇಡಿ- ಮೈಸೂರಿನಲ್ಲಿ ಕುಮಾರಸ್ವಾಮಿ ಎಚ್ಚರಿಕೆ!

ಇತ್ತ ರಾಜ್ಯದಲ್ಲಿರುವ ಅಧಿಕಾರದಲ್ಲಿರುವ ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಸರ್ಕಾರ ಪತನವಾಗಲಿದೆ ಎಂಬ ಚರ್ಚೆಗಳು ಜೋರಾಗಿದ್ದು, ಸತೀಶ್​ ಜಾರಕಿಹೊಳಿ, ರಮೇಶ್ ಜಾರಕಿಹೊಳಿಯವರ ಸುತ್ತ ಚಟುವಟಿಕೆಗಳು ತೀವ್ರಗೊಳ್ಳುತ್ತಿದ್ದರೇ ಅತ್ತ ಸಿಎಂ ಕುಮಾರಸ್ವಾಮಿ ಮಾತ್ರ ಇವೆಲ್ಲವನ್ನು ಸಾರಾಸಗಾಟಾಗಿ ತಳ್ಳಿ ಹಾಕಿದ್ದಾರೆ.
ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಭಾಗಿಯಾಗಿದ್ದ ಕುಮಾರಸ್ವಾಮಿ, ಸರ್ಕಾರ ಸುಭದ್ರವಾಗಿದೆ. ಯಾವ ಶಾಸಕರೂ ಎಲ್ಲೂ ಹೋಗಿಲ್ಲ. ಜನತೆಯ ತೀರ್ಪಿನ ಹಿನ್ನೆಲೆಯಲ್ಲಿ ಸಿಎಂ ಆಗಿದ್ದೇನೆ. ಜನರಲ್ಲಿ ಗೊಂದಲ ಸೃಷ್ಟಿಸುವ ವರದಿ ಮಾಡಬೇಡಿ ಎಂದರು.

ಇನ್ನು ಮಾಧ್ಯಮಗಳನ್ನು ಟೀಕಿಸಿದ ಕುಮಾರಸ್ವಾಮಿ, ಗೌರಿ-ಗಣೇಶ್ ಹಬ್ಬಕ್ಕೆ ಸರ್ಕಾರ ಬೀಳುತ್ತೆ ಅಂತಿರಾ, ಮುಂದೇ ಗಾಂಧಿಜಯಂತಿ, ದಸರಾಗೆ ಬೀಳುತ್ತೆ ಅಂತಿರಾ ಜನರಲ್ಲಿ ಗೊಂದಲ ಸೃಷ್ಟಿಸುವ ವರದಿ ಮಾಡಬೇಡಿ. ಸರ್ಕಾರವನ್ನು ಯಾರಿಂದಲೂ ಅಲುಗಾಡಿಸುವ ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಖಡರ್​ ಎಚ್ಚರಿಕೆ ನೀಡಿದರು. ಒಟ್ಟಿನಲ್ಲಿ ಇತ್ತ ಬಿಜೆಪಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧತೆ ನಡೆಸಿದ್ದರೇ ಅತ್ತ ಕುಮಾರಸ್ವಾಮಿ ಮಾತ್ರ ಏನು ಆಗಿಲ್ಲ ಅಂತಿದ್ದಾರೆ.

Avail Great Discounts on Amazon Today click here