ಮತ್ತೆ ಕಣಕ್ಕಿಳಿತಾರೇ ದೊಡ್ಡಗೌಡ್ರು- ಸಾಥ್​ ಕೊಡ್ತಾರೆ ಇಬ್ಬರು ಮೊಮ್ಮಕ್ಕಳು- ಲೋಕಸಭೆ ಚುನಾವಣೆಯಲ್ಲಿ ಕಿಂಗ್ ಮೇಕರ್​ ಆಗಲಿದೆ ಜೆಡಿಎಸ್​!

 

ad


ರಾಷ್ಟ್ರ ರಾಜಕಾರಣಕ್ಕೆ ಹೊಸ ತಿರುವು ನೀಡಲು ಜೆಡಿಎಸ್​ ಸಜ್ಜಾಗಿದೆ. 2019ರ ಲೋಕಸಭಾ ಅಖಾಡಕ್ಕೆ ಮಣ್ಣಿನ ಮಗ ದೇವೇಗೌಡರು ದುಮುಕಲಿದ್ದಾರೆ ಎನ್ನಲಾಗ್ತಿದೆ. ದೊಡ್ಡ ಗೌಡರಿಗೆ ಪ್ರಧಾನಿಯಾಗುವ ಮತ್ತೊಂದು ಅವಕಾಶ ಸೃಷ್ಟಿಯಾಗ್ತಿದ್ದು, ಇದಕ್ಕಾಗಿ ಈಗಾಗಲೇ ದೊಡ್ಡ ರಾಜಕೀಯ ರಣತಂತ್ರ ಸಿದ್ಧಪಡಿಸುತ್ತಿದ್ದಾರೆ.

 

ರಾಜ್ಯದಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಮೈತ್ರಿ ಮಾಡಿಕೊಂಡಿದ್ದು, ಕೇಂದ್ರದಲ್ಲೂ ಇಂಥದ್ದೇ ಮೈತ್ರಿ ಫಲಿತಾಂಶದ ಮುನ್ಸೂಚನೆ ಸಿಗ್ತಿರೋದ್ರಿಂದ ದೇವೇಗೌಡರು ಸರ್ವ ಸಮ್ಮತಿಯ ನಾಯಕರಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಹೀಗಾಗಿ ತಮ್ಮ ಇಳಿ ವಯಸ್ಸಿನಲ್ಲೂ ದೇವೆಗೌಡರು ಲೋಕಸಭೆ ರಣಾಂಗಣಕ್ಕೆ ಧುಮುಕುವ ಸಿದ್ಧತೆ ನಡೆಸಿದ್ದಾರೆ.

 

ತಾತನ ಈ ರೋಲ್​ಗೆ ಇಬ್ಬರು ಮೊಮ್ಮಕ್ಕಳೂ ಹೆಗಲು ಕೊಡಲು ಸಜ್ಜಾಗಿದ್ದಾರೆ. ಮೈಸೂರು ಲೋಕಸಭೆ ಕ್ಷೇತ್ರದಿಂದ ಮೊಮ್ಮಗ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಲಿದ್ದರೆ, ಮಂಡ್ಯ ಲೋಕಸಭೆ ಅಖಾಡಕ್ಕೆ ನಿಖಿಲ್ ಕುಮಾರಸ್ವಾಮಿ ಧುಮುಕಲಿದ್ದಾರೆ. ಇನ್ನು ಆರು ತಿಂಗಳಲ್ಲಿ ಲೋಕಸಭೆ ಚುನಾವಣೆ ಸಮರ ನಡೆಯಲಿದೆ. ಲೋಕಸಭೆ ಸಮರಕ್ಕೆ ಸಕಲ ರೀತಿಯಲ್ಲಿ ಜೆಡಿಎಸ್​ ಸಜ್ಜಾಗುತ್ತಿದೆ.