ಬಿಜೆಪಿ ಮುಖಂಡರಿಗೆ ಮುತ್ತು ನೀಡಿದ ಎಚ್ ಡಿ ರೇವಣ್ಣ !! ಕಿಸ್ ಕೊಟ್ಟು ಕರೆದ್ರೆ ದೆಹಲಿಗೆ ಬರ್ತಾರಾ ಬಿಜೆಪಿಗರು ?

 

ad


ಕಲರ್ ಫುಲ್ ರಾಜಕಾರಣಿ ಎಚ್ ಡಿ ರೇವಣ್ಣರ ಕೋಪ ಕೂಡಾ ಕಲರ್ ಫುಲ್ ಆಗಿರುತ್ತೆ. ಇಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ವಪಕ್ಷ ನಿಯೋಗ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತ್ತು. ಕೊಡಗು ಸೇರಿದಂತೆ ಕರ್ನಾಟಕದ ನೆರೆ ಸಂತ್ರಸ್ತರಿಗೆ ಹೆಚ್ಚಿನ ಅನುದಾನ ಒದಗಿಸಬೇಕು ಎನ್ನುವುದು ನಿಯೋಗದ ಮನವಿಯಾಗಿತ್ತು. ನಿಯೋಗದ ಬಿಜೆಪಿ ರಾಜ್ಯ ಅಧ್ಯಕ್ಷರು, ಕೇಂದ್ರ ಸಚಿವರುಗಳು ಉಪಸ್ಥಿತರಿಬೇಕು ಎಂದು ಪೂರ್ವಬಾವಿಯಾಗಿ ಕೋರಲಾಗಿತ್ತು. ಆದರೂ ಇಂದಿನ ನಿಯೋಗದಲ್ಲಿ ಬಿಜೆಪಿ ನಾಯಕರು ಗೈರು ಹಾಜರಾಗಿದ್ದರು.

ರಾಜ್ಯದ ಹಿತದೃಷ್ಠಿಯಿಂದ ಪ್ರಧಾನಿ ಭೇಟಿಗೆ ತೆರಳಿದ್ದ ಸರ್ವ ಪಕ್ಷ ನಿಯೋಗದಲ್ಲಿ ಬಿಜೆಪಿ ನಾಯಕರು ಗೈರು ಹಾಜರಾಗಿದ್ದಕ್ಕೆ ಎಚ್ ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳೂ, ಬಿಜೆಪಿಯ ರಾಜ್ಯಾಧ್ಯಕ್ಷರೂ ಆಗಿರುವ ಬಿ ಎಸ್ ಯಡಿಯೂರಪ್ಪನವರಿಗೆ ಕಳೆದ 8 ನೇ ತಾರೀಕಿನಂದೇ ಪತ್ರ ಬರೆಯಲಾಗಿತ್ತು. ನಿಯೋಗದಲ್ಲಿ ಭಾಗಿಯಾಗುವಂತೆ ಕೋರಲಾಗಿತ್ತು. ಆದರೂ ಗೈರಾಗಿದ್ದಾರೆ. ಬಿಜೆಪಿಯವರಿಗೆ ಮುತ್ತು ಕೊಟ್ಟು ದೆಹಲಿಗೆ ಕರೆಯಬೇಕಿತ್ತಾ ? ಎಂದು ಎಚ್ ಡಿ ರೇವಣ್ಣ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಒಟ್ಟು 7 ಜಿಲ್ಲೆಗಳಲ್ಲಿ 2910 ಕಿಮಿ ರಸ್ತೆ ಕೆಟ್ಟು ಹೋಗಿದೆ. ಇದರಲ್ಲಿ 2078 ಕೋಟಿ ಹಾನಿಯಾಗಿದೆ. 419 ಕಿಮೀ ಉದ್ದದ ಸೇತುವೆ ಹಾನಿಯಾಗಿವೆ. ಶಿರಾಡಿ ಘಾಟ್ ನ 26 ಕಿಮೀ ರಸ್ತೆಯನ್ನು 7000 ಕೋಟಿ ರೂಪಾಯಿಗಳ ಯೋಜನೆಯಲ್ಲಿ ದುರಸ್ಥಿ ಮಾಡಲಾಗುತ್ತಿದೆ. ಇದು ಮಂಗಳೂರು ಫೋರ್ಟ್ ನಿಂದ ಚೆನ್ನೈ ಪೋರ್ಟ್ ಸಂಪರ್ಕಿಸುವ ರಸ್ತೆ.

 

 

ಮಂಗಳೂರು -ಸಂಪಾಜಿ ರಸ್ತೆಯ ಚಾರ್ಮುಡಿ ಘಾಟ್ ಅನ್ನು 250 ಕೋಟಿ ಸಿಮೆಂಟ್ ರಸ್ತೆಯನ್ನಾಗಿಸಬೇಕು. ಈ ನಾಲ್ಕು ರಸ್ತೆ ಮಂಗಳೂರಿಗೆ ಮಹತ್ವವಾಗಿವೆ. ಸಕಲೇಶಪುರ-ಮಡಿಕೇರಿ ರಸ್ತೆ, ಸೋಮವಾರಪೇಟೆ -ಮಡಿಕೇರಿ ರಸ್ತೆಯನ್ನು ಪುನರ್ ನಿರ್ಮಾಣ ಮಾಡಬೇಕಿದೆ. ಇಂತಹ ತುರ್ತು ಸಂಧರ್ಭದಲ್ಲಿ ಬಿಜೆಪಿ ಮುಖಂಡರು ನಮ್ಮ ಜೊತೆ ಪ್ರಧಾನಿ ಬಳಿಗೆ ಬರಬೇಕಿತ್ತು. ಆದ್ರೆ ಬಿಜೆಪಿಯವರು ಇಂಥಹ ಸಂದರ್ಭದಲ್ಲಿ ರಾಜಕೀಯ ಮಾಡಿದರು ಎಂದು ಎಚ್ ಡಿ ರೇವಣ್ಣ ಆಕ್ರೊಶ ವ್ಯಕ್ತಪಡಿಸಿದ್ದಾರೆ.