ಸೂಜಿದಾರ ಹಿಂಡ್ಕೊಂಡು ಬರ್ತಿದ್ದಾರೆ ನೀರ್​ ದೋಸೆ ಚೆಲುವೆ! ಹರಿಪ್ರಿಯಾ ಹೊಸ ಲುಕ್​​​ಗೆ ಫ್ಯಾನ್ಸ್​ ಫುಲ್​​ ಖುಷ್​​!!

ಸ್ಯಾಂಡಲ್​ವುಡ್​ನಲ್ಲಿ ವಿಭಿನ್ನ ಕಥೆ, ಟೈಟಲ್​ ಇಟ್ಕೊಂಡು ಸಿನಿಮಾಗಳು ಬರ್ತಾನೆ ಇವೆ. ಈ ಸಾಲಿಗೆ ಮತ್ತೊಂದು ಸಿನಿಮಾ ಸೇರ್ಪಡೆಯಾಗಿದೆ. ಅದೇ ಸೂಜಿದಾರ. ಸದ್ಯ ಸ್ಯಾಂಪಲ್ಸ್​ನಿಂದಲ್ಲೇ ಸೂಜಿದಾರ ಗಾಂಧಿನಗರದಲ್ಲಿ ಟಾಕ್ ಕ್ರಿಯೇಟ್ ಮಾಡಿದೆ. ಈ ಬಗ್ಗೆ ಒಂದು ಸ್ಮಾಲ್ ರಿಪೋರ್ಟ್ ಇಲ್ಲಿದೆ ನೋಡಿ.

ad

ಸ್ಯಾಂಡಲ್​ವುಡ್​ ಚಂದದ ನಟಿ ಹರಿಪ್ರಿಯಾ, ನೀರ್ ದೋಸೆ ಸಿನಿಮಾದಲ್ಲಿ ಮೈ ಚಳಿ ಮಿಟ್ಟು ಥಕ್ಕ ಥೈ ಅಂತಾ ಕುಣಿದ್ದ ಗ್ಲಾಮರ್ ಡಾಲ್​. ಬೆಲ್​ ಬಾಟಂ ಸಿನಿಮಾದಲ್ಲಿ ರೆಟ್ರೋ ಲುಕ್​ನಲ್ಲಿ ಮಿಂಚಿದ್ದ ಬ್ಯೂಟಿ. ಒಟ್ನಲ್ಲಿ ಹರಿಪ್ರಿಯಾ ಯಾವಾಗ್ಲೂ ಕತೆ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚ್ಯೂಸಿ.

 

ಗ್ಲಾಮರ್​, ಡಿ ಗ್ಲಾಮರ್ ಯಾವುದೇ ಪಾತ್ರ ಇರಲಿ ಹರಿಪ್ರಿಯಾ ನಟನೆಗೆ ಅವರೇ ಸರಿಸಾಟಿ. ಹೆಸರಿನಂತೆ ಮಾತು ಕೂಡ ಪ್ರಿಯಾ. ಸ್ಯಾಂಡಲ್​ವುಡ್​ನಲ್ಲಿ ಸಾಲು ಸಾಲು ಸಿನಿಮಾಗಳನ್ನ ಕೈಯಲ್ಲಿ ಇಟ್ಕೊಂಡಿರೋ ನೀರ್​ದೋಸೆ ಬೆಡಗಿ ಇದೇ ಮೊದಲ ಬಾರಿಗೆ ವುಮೇನ್ ಓರಿಯೆಂಟ್ ಸಿನಿಮಾದಲ್ಲಿ ತೆರೆಮೇಲೆ ಬರೋದಿಕ್ಕೆ ರೆಡಿಯಾಗಿದ್ದಾರೆ.

 

ಸೂಜಿದಾರ ಸಿನಿಮಾದಲ್ಲಿ ಡಿಗ್ಲಾಮರ್ ಪಾತ್ರದಲ್ಲಿ ಹರಿಪ್ರಿಯಾ ಮಿಂಚುತ್ತಿದ್ದಾರೆ. ಮೈಮನ ಪೋಣಿಸುವ ಅನ್ನೋ ಟ್ಯಾಗ್​ಲೈನ್ ಇಟ್ಕೊಂಡು ರಿಲೀಸ್​ಗೆ ರೆಡಿಯಾಗಿರೋ ಸೂಜಿದಾರ ಸಿನಿಮಾ ಸೂಕ್ಷ್ಮಸಂವೇದ ಭಾವನೆಗಳನ್ನ ಕಟ್ಟಿಕೊಡವ ಸುಂದರ ಚಿತ್ರ ಅನ್ನೋದನ್ನ ಟೀಸರ್​ ಹಾಗೂ ಸಾಂಗ್ಸ್ ಹೇಳ್ತೀವೆ.

ರಂಗಕರ್ಮಿ ಮೌನೇಶ್ ಬಡಿಗೇರ್ ಸೂಜಿದಾರ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶನಕ್ಕೆ ಧುಮುಕಿದ್ದಾರೆ. ಇನ್ನೂ ಹರಿಪ್ರಿಯಾಗೆ ಜೋಡಿಯಾಗಿ ಯಶವಂತ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈಗ್ಲಾಗ್ಲೇ ಚಿತ್ರತಂಡ ಸಿಂಪಲ್ ಆಗಿ ಆಡಿಯೋ ಲಾಂಚ್​ ಮಾಡಿದೆ. ಹೊಸ ಪ್ರತಿಭೆಗಳೇ ಸೇರಿ ಮಾಡಿರೋ ಸೂಜಿದಾರ ಸಿನಿಮಾ ಮೇ 10ರಂದು ತೆರೆಮೇಲೆ ಬರಲಿದೆ. ಏನೀ ವೇ ಸೂಜಿದಾರ ಕಥೆ ಏನೂ ಅಂತಾ ನೀವು ತಿಳ್ಕೊಳ್ಬೇಕಾದ್ರೆ ಮೇ 10ರವರೆಗೂ ನೀವು ವೇಟ್ ಮಾಡ್ಬೇಕು.