ಸುಮಲತಾ ಪರ ಪ್ರಚಾರಕ್ಕೆ ಹೋಗ್ತಿರಾ? ಅಂತ ಕೇಳಿದ್ರೆ ಜಗ್ಗೇಶ್​ ಏನಂದ್ರು ಗೊತ್ತಾ?!!

ಬಿಜೆಪಿ ಪರೋಕ್ಷವಾಗಿ ಮಂಡ್ಯ ಲೋಕಸಭಾ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್​ಗೆ ಬೆಂಬಲ ನೀಡಿದ್ದರೂ ಬಿಜೆಪಿ ನಾಯಕರು ಮಾತ್ರ ಸುಮಲತಾ ಪ್ರಚಾರಕ್ಕೆ ತೆರಳಲು ಹಿಂದೇಟು ಹಾಕ್ತಿದ್ದಾರೆ. ಚಿತ್ರನಟ ಹಾಗೂ ರಾಜಕೀಯ ಮುಖಂಡ ಜಗ್ಗೇಶ್​ ಕೂಡ ಇದಕ್ಕೆ ಹೊರತಲ್ಲ. ಹೌದು ಸುಮಲತಾ ಪರ ಪ್ರಚಾರಕ್ಕೆ ಹೋಗೋ ವಿಚಾರದ ಕುರಿತು ಪ್ರತಿಕ್ರಿಯಿಸೋದಿಕ್ಕು ಜಗ್ಗೇಶ್ ಹಿಂಜರಿದಿದ್ದಾರೆ.


ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಪ್ರಚಾರಕ್ಕೆ ಆಗಮಿಸಿದ್ದ ಜಗ್ಗೇಶ್​ ಅವರಿಗೆ ಮಾಧ್ಯಮ ಮಿತ್ರರು ಮಂಡ್ಯ ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ಪ್ರಚಾರಕ್ಕೆ ತೆರಳುತ್ತೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಲು ಹಿಂಜರಿದ ಜಗ್ಗೇಶ್, ಅದನ್ನು ಬಿಟ್ಟು ಬೇರೆ ಏನಾದ್ರು ಮಾತಾಡೋಣ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.


ವೈಯಕ್ತಿಕ ಟೀಕೆ ಆರೋಪಗಳನ್ನು ಮಾಡುವುದು ಒಳ್ಳೆಯದಲ್ಲ. ನಾನು ಕೂಡ ಎಲ್ಲಿ ಹೋದ್ರು ಯಾರ ಬಗ್ಗೆಯೂ ವೈಯಕ್ತಿಕ ಟೀಕೆ ಮಾಡೋದಿಲ್ಲ ಎಂಬ ಜಗ್ಗೇಶ್ ಹೇಳಿದರು. ಆದರೆ ಅಂಬರೀಶ್​​ಗೆ ಅತಿ ಆಪ್ತರಾಗಿದ್ದ ಜಗ್ಗೆಶ್​, ಸುಮಲತಾ ರಾಜಕೀಯದ ಸ್ಪರ್ಧೆ ನಿರ್ಧಾರದ ಬಳಿಕ ಒಂದು ದಿನವೂ ಅವರೊಂದಿಗೆ ಕಾಣಿಸಿಕೊಳ್ಳದಿರುವುದು ಹಾಗೂ ಪ್ರಚಾರಕ್ಕೂ ತೆರಳದಿರುವುದು ಅನುಮಾನ ಮೂಡಿಸಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಸುಮಲತಾರನ್ನು ಬೆಂಬಲಿಸಿದ್ದರೂ ಜಗ್ಗೆಶ್​ ಈ ಮೌನ ಸಾಕಷ್ಟು ಅನುಮಾನ ಮೂಡಿಸಿದೆ. ಎಲ್ಲೋ ಒಂದು ಕಡೆ ರಾಜ್ಯ ನಾಯಕರು ಸುಮಲತಾ ಬೆಂಬಲ ನೀಡದೆ ಮೌನವಾಗಿ ಉಳಿದಿದ್ದಾರಾ ಎಂಬ ಅನುಮಾನ ಕೂಡ ಮೂಡಿಸಿದೆ.