ವಾಹನ ಸವಾರರಿಗೆ ಎಚ್​ಡಿಕೆ ಗುಡ್​​ನ್ಯೂಸ್​- 2 ರೂಪಾಯಿ ಕಮ್ಮಿಯಾಗುತ್ತೆ ಪೆಟ್ರೋಲ್ ದರ!

 

ad

ತೈಲ ದರ ಏರಿಕೆಯಿಂದ ಬೇಸತ್ತಿದ್ದ ರಾಜ್ಯದ ಜನರಿಗೆ ಸಿಎಂ ಹೆಚ್​ಡಿ ಕುಮಾರಸ್ವಾಮಿ ಭರ್ಜರಿ ಗಿಫ್ಟ್​ ನೀಡಿದ್ದಾರೆ. ಪೆಟ್ರೋಲ್, ಡಿಸೇಲ್ ಮೇಲಿನ ಸೆಸ್​ನ್ನ, ಪ್ರತಿ ಲೀಟರ್‌ಗೆ ಅನ್ವಯವಾಗುವಂತೆ, ಎರಡು ರೂಪಾಯಿ ಇಳಿಕೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ವೇಳೆ ಮಾಡಿದ ಭಾಷಣದಲ್ಲಿ ಸಿಎಂ ಹೆಚ್‌ಡಿಕೆ ಈ ಬಗ್ಗೆ ಘೋಷಿಸಿದ್ದಾರೆ. ಅಲ್ಲದೆ ಈ ಬಗ್ಗೆ ಸಿಎಂ ಟ್ವಿಟರ್​ ಖಾತೆಯಿಂದಲೂ ಟ್ವೀಟ್​ ಮಾಡಲಾಗಿದೆ.

ಕಲಬುರ್ಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಶುಭಾಶಯಗಳನ್ನ ತಿಳಿಸಿದ್ರು. ನಿಜಾಮರ ವಿರುದ್ಧ ಸೆಡ್ಡು‌ ಹೊಡೆದು ನಿಂತ ಹೈ-ಕ ನಾಯಕರನ್ನು ನೆನೆದ ಸಿಎಂ, ಹೋರಾಟದಲ್ಲಿ ಹುತಾತ್ಮರಾದ ಎಲ್ಲರಿಗೂ ಮನಃಪೂರ್ವಕ‌ ಗೌರವ ಸಲ್ಲಿಸುವೆ ಎಂದು ಹೇಳಿದ್ರು.ವೈಜನಾಥ್ ‌ಪಾಟೀಲ್, ಮಲ್ಲಿಕಾರ್ಜುನ ಖರ್ಗೆ, ದಿ.ಧರ್ಮಸಿಂಗ್ ಅವರ ಸತತ ಹೋರಾಟದ ಫಲವಾಗಿ ಕಲಂ 371(J) ತಿದ್ದುಪಡಿ ಆಗಿದೆ. ಇದರಿಂದ ಹೈ-ಕ ಭಾಗದ ಹೆಚ್ಚಿನ ಯುವಕರಿಗೆ ಸರ್ಕಾರಿ ಉದ್ಯೋಗ ದೊರೆಯುತ್ತಿದೆ. ಕೆಲವು ಇಲಾಖೆಗಳಲ್ಲಿ ಹೈ-ಕ ಮೀಸಲಾತಿ ಅನ್ಯಾಯ ಆರೋಪ ಕೇಳಿಬಂದಿದ್ದು ಇದನ್ನೆಲ್ಲಾ ಸರಿಪಡಿಸಲು ಪ್ರಾಮಾಣಿಕ ‌ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ರು.