ಪತ್ರಕರ್ತ ರವಿಬೆಳಗೆರೆಗೆ ಹೃದಯಾಘಾತ- ಈಗ ಆರೋಗ್ಯ ಸ್ಥಿರವಾಗಿದೆ ಎಂದ ಕುಟುಂಬವರ್ಗ!

ad


ಖ್ಯಾತ ಪತ್ರಕರ್ತ ರವಿ ಬೆಳಗೆರೆ ನಿನ್ನೆ ತಡರಾತ್ರಿ ಲಘುಹೃದಯಾಘಾತಕ್ಕೆ ಒಳಗಾಗಿದ್ದು, ಚಿಕಿತ್ಸೆಗಾಗಿ ನಗರದ ಬಿಜಿಎಸ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆಯಲ್ಲೇ ರವಿ ಬೆಳಗೆರೆಯವರಿಗೆ ಹೃದಯಾಘಾತವಾಗಿದ್ದು, ತಕ್ಷಣ ಅವರ ಕುಟುಂಬಸ್ಥರು ಅವರನ್ನು ಬಿಜಿಎಸ್​ಗೆ ದಾಖಲಿಸಿದ್ದರು.

 

ಪ್ರಾಥಮಿಕ ಚಿಕಿತ್ಸೆ ಬಳಿಕ ಇದೀಗ ಅವರನ್ನು ನಾರಾಯಣ ಹೃದಯಾಲಯಕ್ಕೆ ಕಳುಹಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಮುಂದುವರಿದಿದೆ. ಹಲವು ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ರವಿ ಬೆಳಗೆರೆಗೆ ಕಳೆದ ಡಿಸೆಂಬರ್​ನಲ್ಲಿ ಜಯದೇವ ಆಸ್ಪತ್ರೆಯಲ್ಲಿ ಆಂಜಿಯೋಪ್ಲ್ಯಾಸ್ಟ್​ ಚಿಕಿತ್ಸೆ ಮಾಡಲಾಗಿತ್ತು.
ಆ ಬಳಿಕ ಸುನೀಲ್ ಹೆಗ್ಗರವಳ್ಳಿ ಸುಫಾರಿ ಪ್ರಕರಣ ಹೊರಬಂದು ರವಿ ಬೆಳಗೆರೆ ಬಂಧನಕ್ಕೊಳಗಾದ ವೇಳೆ ಕೂಡ ಕೆಲಕಾಲ ರವಿ ಬೆಳಗೆರೆ ಅಸ್ವಸ್ಥರಾಗಿದ್ದರು. ಇದೀಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.