ಇಲ್ಲಿ ಆಧಾರ್​ ನೋಂದಣಿಗೆ ರಾತ್ರಿಯೇ ಕ್ಯೂ ನಿಲ್ಲಬೇಕು- ಇದು ಕೋಲಾರ ಜನರ ದುಸ್ಥಿತಿ!

ಮುಳುಬಾಗಿಲು ಪಟ್ಟಣದಲ್ಲಿ ಆಧಾರ್ ನೋಂದಣಿ ಮಾಡಿಸುವುದು ಒಂದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಆಧಾರ್ ಕಾರ್ಡ್ ನೋಂದಣಿಗೆ ನಿದ್ದೆಗೆಟ್ಟು ರಾತ್ರಿಯಿಂದಲೇ ಬ್ಯಾಂಕ್ ಎದುರು ಕ್ಯೂ ನಿಲ್ಲುವ ಪರಿಸ್ಥಿತಿ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಎಸ್​ಬಿಐ ಹಾಗೂ ಗ್ರಾಮೀಣ ಬ್ಯಾಂಕ್​ ಬಳಿ ನಿರ್ಮಾಣವಾಗಿದೆ. ಆಧಾರ್ ಕಾರ್ಡಿಗೆ ನೋಂದಣಿ ಮತ್ತು ತಿದ್ದುಪಡಿಗೆ ಅರ್ಜಿ ಸಲ್ಲಿಸಲು ದಿನಪೂರ್ತಿ ಕಾದು ನಿಲ್ಲುವ ಪರಿಸ್ಥಿತಿಯಾಗಿದೆ.
ಕಳೆದ ಐದಾರು ವರ್ಷದಿಂದ ಆಧಾರ್ ಕಾರ್ಡ್ ನೋಂದಣಿ ಮಾಡುತ್ತಿದ್ದರು. ಜನ್ರು ಮಾತ್ರ ಅಧಾರ್ ಮಾಡಿಸದೇ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆ ಈಗ ಸರ್ಕಾರದ ಎಲ್ಲಾ ಕೆಲಸಗಳಿಗೂ ಆಧಾರ್ ಕಡ್ಡಾಯವಾಗಿದ್ದ ಹಿನ್ನಲೆ ಜನ್ರು ಆಧಾರ್ ಮಾಡಿಸಲು ಪರಾದಾಡುತ್ತಿದ್ದಾರೆ. ತಾಲೂಕಿನಲ್ಲಿ ಎರಡು ಬ್ಯಾಂಕ್​ಗಳಲ್ಲಿ ಮಾತ್ರ ಆಧರ್ ನೋಂಧಣಿ ಮಾಡಿಸಬಹುದಾಗಿದ್ದು ಬೇರೆ ಎಲ್ಲೂ ನೋಂದಣಿಗೆ ವ್ಯವಸ್ಥೆ ಮಾಡಿಲ್ಲ. ಇನ್ನು ಬ್ಯಾಂಕ್ ಗಳ ಮುಂದೆ ಕೇವಲ 20 ಜನರಿಗೆ ಮಾತ್ರ ಆಧಾರ್ ನೋಂದಣಿ ಮಾಡಿಕೊಡಲು ಅವಶ್ಯಕವಿದ್ದ ಅದರ ಮೇಲ್ಪಟ್ಟು ನೋಂದಣಿ ಮಾಡಿಕೊಡುವುದಿಲ್ಲ ಎಂದು ಬೋರ್ಡ್​ ಹಾಕಿದ್ದಾರೆ.

ad

ಇನ್ನು ಆಧಾರ್​ ನೋಂದಣಿಗೆ ಬ್ಯಾಂಕ್​ ಸಿಬ್ಬಂದಿ ನೀಡುವ ಟೋಕನ್​ಗಾಗಿ ಬ್ಯಾಂಕ್​ಗಳ ಎದುರು ಜನ್ರು ತಮ್ಮ ಕುಟುಂಬ ಸಮೇತ ಕೆಲಸ ಕಾರ್ಯಗಳನ್ನು ಬಿಟ್ಟು ರಾತ್ರಿಯಿಂದಲೇ ಬ್ಯಾಂಕ್​ ಬಳಿ ಸರದಿ ಸಾಲಿನಲ್ಲಿ ಹಾಸಿಗೆ ಸಮೇತ ಅಲೇ ಮಲಗಿ ಕಾದು ಆಧಾರ್ ಕಾರ್ಡ್ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಇನ್ನು ಈ ವ್ಯವಸ್ಥೆ ಬಗ್ಗೆ ತಾಲೂಕಿನ ಜನ್ರು ತಾಲೂಕು ಆಡಳಿತ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.