ನರಕವಾದ ಕಿಮ್ಸ್ ಆಸ್ಪತ್ರೆ… ರೋಗಿಗಳ ತೀವ್ರ ಪರದಾಟ…ರೋಗಗ್ರಸ್ತವಾದ ಕಿಮ್ಸ್ ಆಸ್ಪತ್ರೆ..

ಉತ್ತರ ಕರ್ನಾಟಕದ ಸಂಜೀವಿನಿ ಎಂದು ಕರೆಸಿಕೊಳ್ಳುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಅಕ್ಷರಶಃ ನರಕವಾಗಿದೆ. ಹೌದು ಕಳೆದ ಎರಡು ದಿನಗಳಿಂದ ಹೊರ ಗುತ್ತಿಗೆ ನೌಕರರು ಪ್ರತಿಭಟನೆ ನಡೆಸ್ತಾಯಿರೋದರಿಂದ ಕಿಮ್ಸ್ ಆಸ್ಪತ್ರೆ ಆಡಳಿತ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ರೋಗಿಗಳು ಆಸ್ಪತ್ರೆಗೆ ಬಂದ್ರೆ ಅವರನ್ನು ಕರೆದುಕೊಂಡು ಹೋಗಲು ಸಿಬ್ಬಂದಿಗಳು ಇಲ್ಲಾ. ಹೀಗಾಗಿ ರೋಗಿಗಳ ಸಂಬಂಧಿಕರು ಸ್ಟ್ರಚ್ಚರ್ ನಲ್ಲಿ ಕುಡಿಸಿಕೊಂಡು ಹೋಗಬೇಕು.

ಗರ್ಭಿಣಿ ಮಹಿಳೆಯ ನಡೆದುಕೊಂಡೇ ಹೋಗುವಂತ ಸ್ಥಿತಿ ನಿರ್ಮಾಣವಾಗಿದೆ. ಕಿಮ್ಸ್ ಆಸ್ಪತ್ರೆಯ ಎಲ್ಲಾ ವಿಭಾಗದಲ್ಲಿ ಸಿಬ್ಬಂದಿಗಳ‌ ಕೊರತೆಯಾಗಿದೆ. ಇನ್ನೂ ಕಿಮ್ಸ್ ನಲ್ಲಿ ಕಳೆದ ಎರಡು ದಿನಗಳಿಂದ ಕಸವನ್ನು ಗುಡಿಸಿಲ್ಲಾ ಹೀಗಾಗಿ ಆಸ್ಪತ್ರೆ ಕಸದಗುಂಡಿಯತ್ತಾಗಿದೆ. ಇನ್ನೂ ಕಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಾಯಿರೋ ಸುಮಾರು‌ 6 ನೂರು ಹೊರ ಗುತ್ತಿಗೆ ನೌಕರರಿಗೆ, ಕಳೆದ ನಾಲ್ಕು ತಿಂಗಳುಗಳಿಂದ ಗುತ್ತಿಗೆದಾರರು ವೇತನ ನೀಡಿಲ್ಲ.

ಹಾಗೇ ಪಿಎಫ್ ಸೇರಿದಂತೆ ಯಾವ್ ಸೌಕರ್ಯ ನೀಡಿಲ್ಲಾ. ಹೀಗಾಗಿ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಕಳೆದ ಎರಡು ದಿನಗಳಿಂದ ಪ್ರತಿಭಟನೆ ಮಾಡ್ತಾಯಿದ್ದು, ಹೋರಾಟದ ಬಿಸಿ ರೋಗಿಗಳ ಮೇಲಾಗಿದೆ. ಕಿಮ್ಸ್ ಆಡಳಿತ ಮಂಡಳಿ ಹಾಗೂ ಗುತ್ತಿಗೆದಾರರ ನಡುವೆ ಮುಸುಕಿನ ಗುದ್ದಾಟ ನೌಕರರು ಪರದಾಡುವಂತಾದ್ರೆ, ನೌಕರರ ಪ್ರತಿಭಟನೆಯಿಂದ ರೋಗಿಗಳ ಸ್ಥಿತಿ ಅಯೋಮಯವಾಗಿದೆ. ಉತ್ತರ ಕರ್ನಾಟಕ ಬಹುದೊಡ್ಡ ಆಸ್ಪತ್ರೆ ನರಕವಾಗಿದ್ದು, ಸೂಕ್ತ ಚಿಕಿತ್ಸೆ ಸಿಗದೇ ರೋಗಿಗಳು ಪರದಾಡುತ್ತಿದ್ದಾರೆ….