ನನಗೇನು ಸಿಎಂ ಆಗುವ ಅರ್ಜೆಂಟಿಲ್ಲ ಅಂದ್ರು ಡಿಕೆಶಿ! ಸಿದ್ಧುಗಿಂತ ಪ್ರಬುದ್ಧತೆ ಮೆರೆದ ಟ್ರಬಲ್​ ಶೂಟರ್​​!!

ಕಾಂಗ್ರೆಸ್​​ ಟ್ರಬಲ್​ ಶೂಟರ್​ ಡಿ.ಕೆ.ಶಿವಕುಮಾರ್ ಕರ್ನಾಟಕದ ಮುಂದಿನ ಸಿಎಂ ಆಗ್ತಾರಾ? ಈ ಪ್ರಶ್ನೆ ಎಲ್ಲರನ್ನು ಸಾಕಷ್ಟು ಬಾರಿ ಕಾಡಿದೆ. ಇದೀಗ ಈ ಪ್ರಶ್ನೆಗೆ ಖುದ್ದು ಡಿ.ಕೆ.ಶಿವಕುಮಾರ್ ಉತ್ತರಿಸಿದ್ದು, ನಾನೇನು ಸನ್ಯಾಸಿಯಲ್ಲ. ಆದರೆ ನನಗೆ ಸಿಎಂ ಆಗೋ ಅರ್ಜೆಂಟ್​ ಇಲ್ಲ ಎನ್ನುವ ಮೂಲಕ ತಮ್ಮ ರಾಜಕೀಯ ಪ್ರಬುದ್ಧತೆ ಮೆರೆದಿದ್ದಾರೆ.

ad

ಹುಬ್ಬಳ್ಳಿಯಲ್ಲಿ ಕುಂದಗೋಳ ಉಪಚುನಾವಣೆ ಪ್ರಚಾರದ ನೇತೃತ್ವ ಹೊತ್ತು ಪ್ರಚಾರದಲ್ಲಿ ತೊಡಗಿರುವ ಡಿ.ಕೆ.ಶಿವಕುಮಾರ್, ನನಗೆ ಸಿಎಂ ಆಗೋಕೆ ಅರ್ಜೆಂಟ್​ ಇಲ್ಲ. ನಾವು ಕುಮಾರಸ್ವಾಮಿಯವರಿಗೆ ಮಾತು ಕೊಟ್ಟಿದ್ದೇವೆ. ಇನ್ನೈದು ವರ್ಷ ಅವರೇ ಮುಖ್ಯಮಂತ್ರಿಯಾಗಿ ಇರ್ತಾರೆ.

2023 ಕ್ಕೆ ಮತ್ತೆ ವಿಧಾನಸಭಾ ಚುನಾವಣೆ ಬರುತ್ತೆ ಆ ಚುನಾವಣೆಯಲ್ಲಿ ಮೊದಲು ಕಾಂಗ್ರೆಸ್​ ಪಕ್ಷವನ್ನು ಅಧಿಕಾರಕ್ಕೆ ತರೋಣ. ಆಮೇಲೆ ಉಳಿದ ವಿಚಾರ ಎನ್ನುವ ಮೂಲಕ ಪಕ್ಷದೆಡೆಗಿನ ತಮ್ಮ ನಿಷ್ಠೆ ಹಾಗೂ ರಾಜಕೀಯ ಮುತ್ಸದ್ಧಿತನವನ್ನು ಮೆರೆದಿದ್ದಾರೆ.

ಈಗಾಗಲೇ ಮಾಜಿ ಸಿಎಂ ಸಿದ್ಧರಾಮಯ್ಯ ಹಲವಾರು ಬಾರಿ ತಾವು ಇನ್ನೊಮ್ಮೆ ಸಿಎಂ ಆಗುವುದಾಗಿ ಹೇಳಿಕೊಳ್ಳುತ್ತಲೇ ಬರೋದರಿಂದ ಅಸಮಧಾನ ಸೃಷ್ಟಿಯಾಗಿದ್ದು, ಮೈತ್ರಿಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ. ಇಂಥ ಹೊತ್ತಿನಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಕೂಡ ಸಿಎಂ ಆಗಬೇಕು ಎಂಬ ಕೂಗು ಕೇಳಿಬಂದಿದ್ದು, ಡಿಕೆಶಿ ಮಾತ್ರ 2023 ರಲ್ಲಿ ಕಾಂಗ್ರೆಸ್​ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದಿದ್ದಾರೆ.