ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ಬಿಡಲ್ಲ- ಹುಬ್ಬಳ್ಳಿಯಲ್ಲಿ ಡಿಕೇಶಿ ಹೇಳಿಕೆ!

ಉತ್ತರ ಕರ್ನಾಟಕದ ಜನರ ಬಹುದಿನದ ಸಮಸ್ಯೆಯಾಗಿರುವ ಮಹದಾಯಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಾನು ಇಂದು ಕಣಕುಂಬಿಗೆ ಭೇಟಿ ನೀಡುತ್ತಿದ್ದೇನೆ. ಮಹದಾಯಿ ವಿಚಾರದಲ್ಲಿ ನಾವು ಮತ್ತೆ ನ್ಯಾಯಾಲಯದ ಮುಂದೇ ಹೋಗುತ್ತಿದ್ದೇವೆ. ನ್ಯಾಯಾಧೀಕರಣ ತೀರ್ಪು ಬಂದ ಬಳಿಕವೂ ನಾವು ಸುಮ್ಮನೆ ಕುಳಿತಿಲ್ಲ. ಕಾನೂನು ತಂಡದ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇವೆ ಎಂದರು.
ಅಲ್ಲದೇ ಕಾವೇರಿಗೆ ಇರುವ ಕಾಳಜಿಗೆ ಮಹದಾಯಿ ಇಲ್ಲ ಎಂಬ ಆರೋಪ ಸರಿಯಲ್ಲ. ನಾವು ರಾಜ್ಯಕ್ಕೆ ಅನ್ಯಾಯವಾಗಲು ಬಿಡೋದಿಲ್ಲ ಎಂದರು. ಇನ್ನು ಸಮ್ಮಿಶ್ರ ಸರ್ಕಾರ ಅಸ್ಥಿರವಾಗಿದೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಡಿ.ಕೆಶಿ ಎಲ್ಲ ಶಾಸಕರು ನಮ್ಮೊಂದಿಗೆ ಇದ್ದಾರೆ. ಸರ್ಕಾರದಲ್ಲಿ ಯಾವುದೇ ಭಿನ್ನಮತ ಇಲ್ಲ. ಆಲ್​ ಈಸ್​ ವೆಲ್ ಎಂದರು.