ನನ್ನ ತಂದೆ ಹತ್ಯೆ ಆರೋಪಿ ಸತ್ತಾಗ ನನಗೆ ಸಂತೋಷವಾಗಲಿಲ್ಲ- ಜರ್ಮನಿಯಲ್ಲಿ ರಾಹುಲ್ ಗಾಂಧಿ ಭಾವುಕನುಡಿ!

ಅದ್ಯಾಕೋ ಗೊತ್ತಿಲ್ಲ, ಕಾಂಗ್ರೆಸ್​​ನ ರಾಷ್ಟ್ರೀಯ ಅಧ್ಯಕ್ಷ, ಭಾವಿ ಪ್ರಧಾನಿ ಎಂದೇ ಬಿಂಬಿತವಾಗೋ ರಾಹುಲ್​ ಗಾಂಧಿಯವರ ಭಾಷಣ ಯಾವಾಗ್ಲೂ ಗಂಭೀರವಾಗಿ ಇರೋದೆ ಇಲ್ಲ ಅನ್ನೋ ಮಾತುಗಳು ಕೇಳಿಬರುತ್ತೆ. ಆದರೇ ಈ ಭಾರಿ ರಾಹುಲ್ ಗಾಂಧಿ ಭಾಷಣ ನಿಜಕ್ಕೂ ಅವರ ಭಾವುಕ ಮನಸ್ಸನ್ನು ಬಿಚ್ಚಿಟ್ಟಿದ್ದು, ಎಲ್ಲರನ್ನು ಸೆಳೆದಿದೆ. ಜರ್ಮನಿಯ ಬುಸೆರಿಯಸ್​ ಸಮ್ಮರ್ ಸ್ಕೂಲ್​ನಲ್ಲಿ ಮಾತನಾಡಿದ ರಾಹುಲ್​ ನನ್ನ ತಂದೆಯನ್ನು ಹತ್ಯಗೈಯ್ದ ಆರೋಪಿ ಸತ್ತಾಗ ನನಗೆ ಸಂತೋಷವಾಗಿರಲಿಲ್ಲ. ಅವರ ಮಕ್ಕಳ ಸ್ಥಿತಿ ನೆನೆದು ದುಃಖವಾಗಿತ್ತು ಎಂದಿದ್ದಾರೆ. ರಾಹುಲ್​ ಈ ಭಾವುಕ ಭಾಷಣ, ಇದೀಗ ಎಲ್ಲೆಡೆ ವೈರಲ್​ ಆಗಿದೆ.

ad ಜರ್ಮನಿಯ ಬುಸೆರಿಯಸ್​ ಸಮ್ಮರ್ ಸ್ಕೂಲ್​ನಲ್ಲಿ ಮಾತನಾಡಿದ ರಾಹುಲ್ ಗಾಂಧಿ ಹಿಂದೆಂದಿಗಿಂತ ಹೆಚ್ಚು ಭಾವುಕವಾದಂತಿದ್ದರು. ಹಿಂಸಾಚಾರದ ಕಾರಣ ನಾನು ನನ್ನ ಕುಟುಂಬದ ಇಬ್ಬರನ್ನು ಕಳೆದುಕೊಂಡಿದ್ದೇನೆ. ನನ್ನ ಅಜ್ಜಿ ಇಂದಿರಾಗಾಂಧಿ ಹಾಗೂ ನನ್ನ ತಂದೆ ರಾಜೀವಗಾಂಧಿಯನ್ನು ಹತ್ಯೆ ಮಾಡಲಾಯಿತು. ಇದರಿಂದ ನಾನು ನನ್ನ ಕುಟುಂಬ ಸಂಕಷ್ಟಕ್ಕೊಳಗಾಗಿದ್ದೇವೆ. ಆದರೇ ಈ ಎಲ್ಲ ಹಿಂಸಾಚಾರಗಳ ದಾಟಿ ನೀವು ಮುಂದೇ ಸಾಗಬೇಕಾದರೇ ಕ್ಷಮೆಯೊಂದೇ ದಾರಿ ಎಂದು ರಾಹುಲ್​ ಮಾರ್ಮಿಕವಾಗಿ ನುಡಿದಿದ್ದಾರೆ.

 

ಅಷ್ಟೇ ಅಲ್ಲ ರಾಜೀವಗಾಂಧಿ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಎಲ್​ಟಿಟಿಇ ಮುಖ್ಯಸ್ಥ ಪ್ರಭಾಕರನ್ ಹತ್ಯೆಯಾದಾಗ ನನಗೆ ಮತ್ತು ನನ್ನ ಸಹೋದರಿ ಪ್ರಿಯಾಂಕಾಗಾಎ ಸಂತೋಷವಾಗಿರಲಿಲ್ಲ. ಆತನ ಮಕ್ಕಳನ್ನು ನೆನೆದು ದುಃಖವಾಯಿತು. ನಾನು ನನ್ನ ತಂದೆಯನ್ನು ಕಳೆದುಕೊಂಡಾದ ದುಃಖಿಸಿದ್ದಂತೆ ಅವರು ದುಃಖಿಸುತ್ತಿರಬಹುದುಎಂಬುದು ನನ್ನ ಗಮನಕ್ಕೆ ಬಂತು, ಆ ಮಕ್ಕಳಲ್ಲಿ ನಾನು ನನ್ನನ್ನು ಕಂಡೆ ಎಂದು ರಾಹುಲ್​ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ತಂದೆ ಸಾವಿನಿಂದ ರಾಹುಲ್ ಗಾಂಧಿ ಎಷ್ಟು ನೊಂದಿದ್ದರು ಎಂಬುದನ್ನು ಅವರ ಭಾಷಣ ಕಟ್ಟಿಕೊಟ್ಟಿದೆ. ಸದಾಕಾಲ ರಾಜಕೀಯ ಕುರಿತೇ ಮಾತನಾಡುವ ರಾಹುಲ್ ಗಾಂಧಿಯವರು ಈ ಭಾರಿ ತಮ್ಮ ವೈಯಕ್ತಿಕ ವಿಚಾರಗಳ ಕುರಿತು ಅಭಿಪ್ರಾಯಹಂಚಿಕೊಂಡಿದ್ದಾರೆ.