ಕೈಯಲ್ಲಿ ಬಂದೂಕು ಕಂಡರೆ ಕಂಡಲ್ಲಿ ಗುಂಡಿಕ್ಕಿ ಸಾಯಿಸುತ್ತೇವೆ- ಕಾಶ್ಮೀರದಲ್ಲಿ ಭಾರತೀಯ ಸೇನೆಯ ಖಡಕ್ ವಾರ್ನಿಂಗ್

ಕಾಶ್ಮೀರದಲ್ಲಿ ಪರಿಸ್ಥಿತಿ ಅತಿ ಸೂಕ್ಷ್ಮವಾಗಿದ್ದು ಭಾರತೀಯ ಸೇನೆಯ ವಿರುದ್ದ ಕೈಯಲ್ಲಿ ಯಾರೇ ಬಂದೂಕು ಹಿಡಿದರೂ ಅವರನ್ನು ನಿರ್ದಾಕ್ಷಿಣ್ಯವಾಗಿ ಕೊಂದು ಹಾಕಲಾಗುತ್ತದೆ ಎಂದು ಕಾಶ್ಮೀರಿ ಯುವಕರಿಗೆ ಭಾರತೀಯ ಸೇನೆ ಖಡಕ್ ಎಚ್ಚರಿಕೆ ನೀಡಿದೆ.

ಮಂಗಳವಾರ ಸಿಆರ್‌ಪಿಎಫ್, ಸೇನೆ ಹಾಗೂ ಪೊಲೀಸ್ ಇಲಾಖೆಯ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿನಾರ್ ಸೈನ್ಯದಳದ ಕಮಾಂಡರ್ ಕನ್ವಲ್‌ಜೀತ್ ಸಿಂಗ್ ಧಿಲಾನ್ ಅವರು ಉಗ್ರ ಸಂಘಟನೆ ಸೇರಿರುವ ತಮ್ಮ ಮಕ್ಕಳನ್ನು ಮುಖ್ಯವಾಹಿನಿ ಸೇರುವಂತೆ ಮನವೊಲಿಸಬೇಕು ಎಂದು ಕಾಶ್ಮೀರಿ ಮನವಿ ಮಾಡಿದ್ದಾರೆ. ಶರಣಾಗದೇ ಬಂದೂಕು ಹಿಡಿದು ಸೇನೆಯ ವಿರುದ್ಧ ನಿಂತಲ್ಲಿ ಅವರನ್ನು ಯಾವುದೇ ಮುಲಾಜಿಲ್ಲದೆ ಕೊಂದು ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.