ಅಕ್ರಮ ವಲಸೆ ಪ್ರಕರಣ! ದಂಪತಿ ಗಡಿಪಾರಿಗೆ ಖಡಕ್ ಆದೇಶ ನೀಡಿದ ಹೈಕೋರ್ಟ್​! ವಾಘಾ ಗಡಿ ತಲುಪಿದ ದಂಪತಿ!!

ಅಕ್ರಮ ವಲಸೆ ಹಾಗೂ ಕಾನೂನು ಬಾಹಿರ ವಾಸ್ತವ್ಯದ ಆರೋಪ ಎದುರಿಸುತ್ತಿದ್ದ ಪಾಕ್​ ಮೂಲದ ದಂಪತಿಗಳನ್ನು ಗಡಿಪಾರು ಮಾಡುವಂತೆ ಹೈಕೋರ್ಟ್​ ಆದೇಶಿಸಿದ್ದು, ಹೈಕೋರ್ಟ್ ಆದೇಶದಂತೆ ಕುಮಾರಸ್ವಾಮಿ ಲೇಔಟ್​ ಪೊಲೀಸರು ದಂಪತಿಗಳನ್ನು ವಾಘಾ ಗಡಿ ತಲುಪಿಸಿದ್ದು, ಅಲ್ಲಿಂದ ಗಡಿಪಾರು ಮಾಡಿ ವಾಪಸ್ಸಾಗಲಿದ್ದಾರೆ.

ad

ಕಿರಣ ಗುಲಾಮ್ ಅಲಿ ಮತ್ತು ಖಾಸಿಫ್​ ಶಂಶುದ್ದೀನ್​ ಹೀಗೆ ಗಡಿಪಾರಿಗೆ ಒಳಗಾದ ದಂಪತಿ. ಕೇರಳದ ಸಿಹಾದ್ ಕರಾಚಿ ಮೂಲದ ಸಮೀರಾ ಎನ್ನುವ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ. ವಿವಾಹದ ಬಳಿಕ ತನ್ನ ನಾದಿನಿ ಕಿರಣ್ ಗುಲಾಮ್ ಅಲಿ(ಝೈನಬ್​) ಮತ್ತು ಖಾಸಿಫ್​​ ಶಂಶುದ್ಧೀನ್ ದಂಪತಿಯನ್ನು ತನ್ನೊಂದಿಗೆ ನೇಪಾಳ ಮಾರ್ಗವಾಗಿ ಅಕ್ರಮವಾಗಿ ತನ್ನೊಂದಿಗೆ ನಗರಕ್ಕೆ ಕರೆತಂದು ವಾಸವಾಗಿದ್ದ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಕುಮಾರಸ್ವಾಮಿ ಲೇಔಟ್​ ಪೊಲೀಸರು, ಮೇ 25, 2017 ದಾಳಿ ನಡೆಸಿ ಅಕ್ರಮ ವಾಸ್ತವ್ಯವನ್ನು ಪತ್ತೆಹಚ್ಚಿದ್ದರು. ವಿವಾಹವಾಗಿದ್ದ ಸಿಹಾದ್ ಮತ್ತು ಸಮೀರಾ ದಂಪತಿಗಳಿಗೆ ಭಾರತದಲ್ಲಿ ವಾಸ ಮಾಡಲು ಅವಕಾಶ ನೀಡಿದ್ದ ಸೆಷನ್ಸ್ ನ್ಯಾಯಾಲಯ ಕಿರಣ್ ಗುಲಾಮ್ ಅಲಿ ಮತ್ತು ಖಾಸಿಫ್​ ಶಂಶುದೀನ್​ ದಂಪತಿಗೆ 21 ತಿಂಗಳುಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು.

ಈ ದಂಪತಿ ಶಿಕ್ಷೆ ಪ್ರಮಾಣ ಕಡಿಮೆ ಮಾಡುವಂತೆ ಹೈಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್​ ಈ ದಂಪತಿಯನ್ನು ತಕ್ಷಣ ಗಡಿಪಾರು ಮಾಡುವಂತೆ ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ಏಪ್ರಿಲ್ 26 ರಂದು ಆದೇಶಿಸಿತ್ತು.
ಮೇ 25 2017 ರಂದು ನಡೆದ ದಾಳಿ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಅಕ್ರಮ ವಲಸೆ ಬಂದಿದ್ದ ದಂಪತಿಗಳ ಭದ್ರತೆಯ ಪ್ರಶ್ನೆಯನ್ನೇ ಹುಟ್ಟುಹಾಕಿದ್ದರು. ಇದೀಗ ಹೈಕೋರ್ಟ್ ಗಡಿಪಾರಿಗೆ ಆದೇಶ ನೀಡುವ ಮೂಲಕ ಪ್ರಕರಣಕ್ಕೆ ಅಂತ್ಯಹಾಡಿದೆ.