ಅರಣ್ಯರಕ್ಷಕರ ನೇಮಕದಲ್ಲಿ ಅಕ್ರಮ- ಬಾಗಲಕೋಟೆಯಲ್ಲಿ ಅಬ್ಯರ್ಥಿಗಳಿಂದ ಆರೋಪ!

ಅರಣ್ಯ ಇಲಾಖೆಯ ‘‘ಅರಣ್ಯ ವೀಕ್ಷಕ’’ ಹುದ್ದೆಗೆ ನಡೆಸುತ್ತಿರುವ ನೇರನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.ಹೌದು ಇದಕ್ಕೆ ಸಾಕ್ಷಿಯಾಗಿದ್ದು ಬಾಗಲಕೋಟೆ ನಗರದ ಜಿಲ್ಲಾಕ್ರೀಡಾಂಗಣದಲ್ಲಿ ಅರಣ್ಯ ಇಲಾಖೆ ನಡೆಸುತ್ತಿರುವ ನೇರನೇಮಕಾತಿ ಪ್ರಕ್ರಿಯೆ.ರಾಜ್ಯಾದ್ಯಂತ ಸರ್ಕಾರ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 94 ಅರಣ್ಯ ವೀಕ್ಷಕ ಹುದ್ದೆಗಳಿಗೆ ನೇರನೇಮಕಾತಿಗೆ ಆದೇಶಿಸಿದೆ.ಅದೇ ಪ್ರಕಾರ ಆಯಾ ಜಿಲ್ಲಾ ಕೇಂದ್ರಗಳಲ್ಲಿ ನೇಮಕಾತಿ ನಡೆಸಲಾಗುತ್ತಿದೆ.

ಆದ್ರೆ ಬಾಗಲಕೋಟೆ ನಗರದಲ್ಲಿ ನಡೆಸುತ್ತಿರುವ ನೇಮಕಾತಿಯಲ್ಲಿ ಅಕ್ರಮ ನಡೆಸಲಾಗುತ್ತಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಉದ್ದ ಜಿಗಿತ,ಎತ್ತರ ಜಿಗಿತ,ಹಾಗೂ ಓಟದ ಸ್ಪರ್ಧೆಗಳನ್ನ ನಡೆಸಲಾಗುತ್ತಿದೆ.ಆದ್ರೆ ಇಲ್ಲಿ ತಮಗೆ ಬೇಕಾದವರು ಉದ್ದ ಎತ್ತರ ಜಿಗಿಯದಿದ್ದರೂ ಅಂಥವರನ್ನ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಡಿ.ಎಫ್.ಓ ಬಸವರಾಜ ಮೊದಲಿಗೆ ಅಂಥ ಅಭ್ಯರ್ಥಿಗಳನ್ನ ಅನರ್ಹಗೊಳಿಸುವುದಾಗಿ ಅಭ್ಯರ್ಥಿಗಳಿಗೆ ಭರವಸೆ ನೀಡಿ ದರು,ನಂತರ ಮತ್ತೆ ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದ್ದರಿಂದ ಅಭ್ಯರ್ಥಿಗಳು ರೊಚ್ಚಿಗೆದ್ದು ಮರು ಪರೀಕ್ಷೆ ನಡೆಸುವಂತೆ ಒತ್ತಾಯಿಸಿದ್ದಾರೆ.