ಇಂಗ್ಲೆಂಡ್​ನಲ್ಲಿ ನಡೆಯುವ ವಿಶ್ವಕಪ್​ನಲ್ಲಿ ಭಾರತ ಗೆಲ್ಲುವ ಕುದುರೆ ಎಂದ್ರು ಕ್ರಿಕೆಟ್​ ವಾಲ್​ ರಾಹುಲ್ ದ್ರಾವಿಡ್​​!!

ಇಂಗ್ಲೆಂಡ್ ನಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ಗೆಲ್ಲುವ ನೆಚ್ಚಿನ ತಂಡ ಎಂದು ವಾಲ್ ಖ್ಯಾತಿಯ , ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.ಉಡುಪಿಯ ಮಣಿಪಾಲದಲ್ಲಿ ಇಂದು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು.

ad

ಇಂಗ್ಲೆಂಡ್ ನಲ್ಲಿ ವಿಶ್ವಕಪ್ ನಡೆಯುವುದರಿಂದ ತವರು ನೆಲದ ಲಾಭ ಇಂಗ್ಲೆಂಡ್ ಪಡೆದುಕೊಳ್ಳಲಿದೆ. ಮತ್ತು ಉತ್ತಮ ಆಟಗಾರದಿಂದ ಕೂಡಿದ ಇಂಗ್ಲೆಂಡ್ ಗೆ ವಿಶ್ವಕಪ್ ಫೈನಲ್ ತಲುಪುವ ಎಲ್ಲಾ ಸಾಧ್ಯತೆ ಇದೆ. ಹಾಗೆನೇ ಆಷ್ಟ್ರೇಲಿಯಾ ಕೂಡಾ ಫೈನಲ್ ತಲುಪುವ ತಂಡವಾಗಿದೆ. ಇದರ ಜೊತೆ ಭಾರತಕೂಡಾ ಫೈನಲ್ ತಲುಪಿ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದರು.

ಇನ್ನು ನಾಲ್ಕನೇ ಕ್ರಮಾಂಕದ ಆಟಗಾರರ ಆಯ್ಕೆಯ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ರಾಯಡು, ಪಂತ್ ಮಾತ್ರವಲ್ಲದೇ ರಹಾನೆ, ಪಾಂಡೆ ಹೀಗೆ ಉತ್ತಮ ಆಟಗಾರದಿದ್ದಾರೆ,ಆದ್ರೆ ತಂಡದ ಸಮತೋಲನದ ದೃಷ್ಟಿಯಿಂದ ಆಯ್ಕೆ ಸಮಿತಿ ಆಟಗಾರರನ್ನು ಆಯ್ಕೆ ಮಾಡುತ್ತದೆ. ಇದರಿಂದ ಕೆಲ ಆಟಗಾರರಿಗೆ ನೋವಾಗುವುದು ಸಹಜ. ಯಾಕೆಂದರೆ ವಿಶ್ವಕಪ್ ನಲ್ಲಿ ನಾನು ಆಡಬೇಕೆಂದ ಆಸೆ ಇರುತ್ತದೆ.ಆದ್ರೆ ೧೫ ಮಂದಿ ಮಾತ್ರ ಆಟಗಾರ ಆಯ್ಕೆ ಮಾಡಲು ಸಾಧ್ಯವಿದೆ ಎಂದರು.