ಸುಪ್ರೀಂ ಅಂಗಳಕ್ಕೆ ಮತ್ತೈದು ಅತೃಪ್ತ ಶಾಸಕರು! ಅರ್ಜಿ ವಾಪಸ್ ಪಡೀತಾರಾ ಎಂಟಿಬಿ, ಡಾ.ಸುಧಾಕರ್​?!

ಈಗಾಗಲೇ ಸುಪ್ರೀಂ ಕೋರ್ಟ್​​ ಮೆಟ್ಟಿಲೇರಿರುವ ಅತೃಪ್ತರ ಅರ್ಜಿ ವಿಚಾರಣೆ ಮಂಗಳವಾರಕ್ಕೆ ಮುಂದೂಡಿಕೆಯಾಗಿರುವಾಗಲೇ, ತಮ್ಮ ರಾಜೀನಾಮೆಯನ್ನು ಅಂಗೀಕರಿಸಲು ಸ್ಪೀಕರ್​ಗೆ ಸೂಚನೆ ನೀಡಿ ಎಂಬ ಮನವಿಯೊಂದಿಗೆ ಮತೈದು ಶಾಸಕರು ಸುಪ್ರೀಂ ಮೆಟ್ಟಿಲೇರಿದ್ದಾರೆ.

ad


ಈಗಾಗಲೇ ರಾಜೀನಾಮೆ ಸಲ್ಲಿಸಿರುವ 16 ಶಾಸಕರ ಪೈಕಿ 10 ಶಾಸಕರು ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಮಂಗಳವಾರಕ್ಕೆ ವಿಚಾರಣೆ ಮುಂದೂಡಿದೆ. ಇದರ ಬೆನ್ನಲ್ಲೇ ಇನ್ನುಳಿದ 5 ಶಾಸಕರು ತಮ್ಮ ರಾಜೀನಾಮೆ ಅಂಗೀಕಾರಕ್ಕೆ ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದಾರೆ.

ಎಂಟಿಬಿ ನಾಗರಾಜ್, ರೋಷನ್ ಬೇಗ್, ಆನಂದ್ ಸಿಂಗ್, ಮುನಿರತ್ನ ಹಾಗೂ ಕೆ.ಸುಧಾಕರ್ ರಾಜೀನಾಮೆ ಅಂಗೀಕಾರ ಅನಗತ್ಯ ವಿಳಂಬದ ವಿರುದ್ಧ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಐವರು ಶಾಸಕರು ಪ್ರತ್ಯೇಕವಾಗಿ ಅಫಡವಿಟ್​ ಸಲ್ಲಿಸಿದ್ದು, ಇನ್ನುಳಿದ 10 ಶಾಸಕರ ಜೊತೆಗೆ ತಮ್ಮ ಅರ್ಜಿಯನ್ನು ಪರಿಗಣಿಸುವಂತೆ ಕೋರಿದ್ದಾರೆ.


ಈ ಮಧ್ಯೆ ನಿನ್ನೆ ಡಿಕೆಶಿ ನಡೆಸಿದ ಆಫರೇಶನ್ ಬಳಿಕ ಎಂಟಿಬಿ ನಾಗರಾಜ್ ಮನಸ್ಸು ಬದಲಾಯಿಸಿದ್ದು, ಕಾಂಗ್ರೆಸ್​ನಲ್ಲೇ ಮುಂದುವರಿಯಲು ಹಾಗೂ ಸುಧಾಕರ್​ ಅವರನ್ನು ಮನವೊಲಿಸಲು ನಿರ್ಧರಿಸಿದ್ದಾರೆ.

ಹೀಗಾಗಿ ಸುಪ್ರೀಂಗೆ ಸಲ್ಲಿಸಿರೋ ಅರ್ಜಿ ಕತೆ ಏನು? ಸೋಮವಾರ ಎಂಟಿಬಿ ತಮ್ಮ ಅರ್ಜಿ ವಾಪಸ್ಸು ಪಡೆಯುತ್ತಾರಾ? ಎಂಬ ಕುತೂಹಲ ಮನೆ ಮಾಡಿದೆ.