ಮಂಡ್ಯ-ಹಾಸನದಲ್ಲಿ ಮತ್ತೆ ಐಟಿ ದಾಳಿ! ಸಚಿವ ರೇವಣ್ಣ, ಪುಟ್ಟರಾಜು ಆಪ್ತರಿಗೆ ಶಾಕ್​! ದೇವೆಗೌಡರ ಸಂಬಂಧಿ ಮನೆಯಲ್ಲೂ ಶೋಧ!!

ರಾಜ್ಯದಲ್ಲಿ ಚುನಾವಣೆ ಮುಗಿಯುವವರೆಗೂ ಐಟಿ ಅಧಿಕಾರಿಗಳು ವಿಶ್ರಮಿಸುವ ಲಕ್ಷಣವೇ ತೋರುತ್ತಿಲ್ಲ. ಹಾಸನ ಮತ್ತು ಮಂಡ್ಯದಲ್ಲಿ ಮತ್ತೊಮ್ಮೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು, ಸಚಿವ ರೇವಣ್ಣ ಆಪ್ತರು ಹಾಗೂ ಮಂಡ್ಯದಲ್ಲಿ ಸಚಿವ ಪುಟ್ಟರಾಜು ಆಪ್ತರಿಗೆ ಮತ್ತೆ ಐಟಿ ಶಾಕ್ ನೀಡಿದ್ದಾರೆ.

ad

ಹಾಸನದಲ್ಲಿ ಸಚಿವ ರೇವಣ್ಣ ಆಪ್ತರಾಗಿರುವ ಲೋಕೋಪಯೋಗಿ ಮೂವರು ಗುತ್ತಿಗೆದಾರರು ಹಾಗೂ ಸಂಬಂಧಿಕರ ಮನೆ ಮೇಲೆ ಐಟಿ ದಾಳಿ ನಡೆಸಿದ್ದಾರೆ. ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಹೊನ್ನವಳ್ಳಿ ಸತೀಶ್​, ವಿಧಾನಪರಿಷತ್​ ಮಾಜಿ ಸದಸ್ಯ ಪಟೇಲ್ ಶಿವರಾಂ, ದೇವೆಗೌಡರ ಸೋದರ ಸಂಬಂಧಿ ಪಾಪಣ್ಣಿ, ರೇವಣ್ಣ ಆಪ್ತ ಇಂದ್ರೇಶ್ ಮನೆ ಮೇಲೆ ದಾಳಿ ನಡೆದಿದೆ.


ಮುಂಜಾನೆಯೇ ದಾಳಿ ನಡೆಸಿರುವ ಅಧಿಕಾರಿಗಳು ಮನೆಯಲ್ಲಿ ಶೋಧ ನಡೆಸಿದ್ದು, ದಾಖಲೆಗಳ ಪರಿಶೀಲನೆಯಲ್ಲೂ ತೊಡಗಿದ್ದಾರೆ. ಮಂಡ್ಯದಲ್ಲೂ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳ ರೇಡ್​ ನಡೆಸಿದ್ದು, ಪುಟ್ಟರಾಜು ಸಂಬಂಧಿ ಜಿಲ್ಲಾ ಪಂಚಾಯತಿ ಸದಸ್ಯ ತಿಮ್ಮೇಗೌಡ ಮನೆಯಲ್ಲಿ ಪರಿಶೀಲನೆ ನಡೆದಿದೆ.


ಪಾಂಡವಪುರದಲ್ಲಿರುವ ಮನೆ ಹಾಗೂ ಕಚೇರಿಯಲ್ಲಿ ಅಧಿಕಾರಿಗಳ ಪರಿಶೀಲನೆ ನಡೆಸಿದ್ದಾರೆ. ಮದ್ದೂರಿನ ಸಾದೊಳಲು ಸ್ವಾಮಿ ಮನೆ, ಕಚೇರಿಯಲ್ಲಿ ಪರಿಶೀಲನೆ ನಡೆದಿದ್ದು, ಸ್ವಾಮಿ ಒಡೆತನದ ಸೋಮೇಶ್ವರ ಪರ್ಟಿಲೈಸರ್​​ ಕಂಪನಿಯಲ್ಲಿ ಪರಿಶೀಲನೆ ತೊಡಗಿದ್ದು, 10ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಮುಗಿಯುವರೆಗೂ ಐಟಿ ದಾಳಿ ಮುಂದುವರೆಯುವ ಲಕ್ಷಣವಿದೆ.