ರ‌್ಯಾಪರ್ ಚಂದನ ಶೆಟ್ಟಿಗೆ ಬರ್ತಡೇ ಸಂಭ್ರಮ- ಮೈಸೂರಿನಿಂದ ಬಂದು ಶುಭಹಾರೈಸಿದ ನಿವೇದಿತಾ ಗೌಡ!

ad


ಕನ್ನಡ ರ‌್ಯಾಪರ್ ಕಲಾವಿದ ಹಾಗೂ ಬಿಗ್​ಬಾಸ್​ ರಿಯಾಲಿಟಿ ಶೋ ವಿಜೇತ ಚಂದನ್ ಶೆಟ್ಟಿ ಇಂದು ತಮ್ಮ ೨೯ನೇ ಹುಟ್ಟು ಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಂಡ್ರು. ನಗರದ ನಾಗರಬಾವಿ ವಿಲೇಜ್ ನ ತಮ್ಮ ನಿವಾಸದಲ್ಲಿ ತಡರಾತ್ರಿ ಕೇಕ್ ಕತ್ತರಿಸಿದ ಚಂದನ ಅಭಿಮಾನಿಗಳಿಗೆ ಕೇಕ್​ ತಿನ್ನಿಸಿ ಸಂಭ್ರಮಿಸಿದರು.

 

ಚಂದನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ನಿವಾಸದ ಬಳಿ ಸಾಕಷ್ಟು ಜನ ಅಭಿಮಾನಿಗಳು ಸೇರಿದ್ರು.. ಇನ್ನು ಇದೇ ವೇಳೆ ಮೈಸೂರಿನಿಂದ ಬಿಗ್​ಬಾಸ್​ ಸ್ಪರ್ಧಿಯಾಗಿದ್ದ ನಿವೇದಿತ ಹಾಗೂ ಆಕೆಯ ತಂದೆ ತಾಯಿ ಕೂಡ ಚಂದನ್ ಹುಟ್ಟು ಹಬ್ಬ ಆಚರಿಸಲು ಆಗಮಿಸಿದ್ರು
ಇನ್ನು ಚಂದನ ಹುಟ್ಟುಹಬ್ಬಕ್ಕೆ ಆಚರಿಸಿದ ಅಭಿಮಾನಿಗಳಿಗೆ ಸ್ನೇಹಿತರಿಗೆ ಗಿಡವನ್ನು ಕೊಡುಗೆಯಾಗಿ ನೀಡಿದ್ರು. ಬಳಿಕ ಮಾತನಾಡಿದ ಚಂದನ, ಬಿಗ್ ಬಾಸ್ ನನಗೆ ಬಿಗ್ ಟರ್ನ್ ನೀಡಿದೆ.. ಜನ ನನ್ನ ಹೆಚ್ಚು ಗುರುತಿಸಿದ್ದಾರೆ.. ನನ್ನ ಸಾಂಗ್ ಗಳನ್ನು ಇಷ್ಟ ಪಟ್ಟಿದ್ದಾರೆ.. ಅತಿ ಶೀಘ್ರದಲ್ಲಿ ಹೊಸ ಆಲ್ಬಂ ಕೂಡ ಬಿಡುಗಡೆ ಮಾಡ್ತಿನಿ ಅಂದ್ರು.