ಮರಾಠರ ಕೋಟೆಯಲ್ಲಿ ಕನಕಪುರ ಸಿಂಹ ಗರ್ಜನೆ! ಅತೃಪ್ತರನ್ನು ಭೇಟಿ ಮಾಡಿಯೇ ಹೋಗ್ತೇನೆ! ಪಟ್ಟು ಬಿಡದ ಡಿಕೇಶಿ!!

ಅತೃಪ್ತರ ಮನವೊಲಿಕೆಗಾಗಿ ಮುಂಬೈಗೆ ಆಗಮಿಸಿರುವ ಸಚಿವ ಡಿ.ಕೆ.ಶಿವಕುಮಾರ್ ಅತೃಪ್ತರ ಭೇಟಿ ವಿನಃ ಹಿಂತಿರುಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ದಂಡಿಗೆ ಹೆದರಿಲ್ಲ, ದಾಳಿಗೆ ಹೆದರಿಲ್ಲ. ಇನ್ನು ಟ್ರಬಲ್ ಶೂಟರ್ ಡಿಕೆಶಿ ಮುಂಬೈ ಪೊಲೀಸರಿಗೆ ಹೆದರ್ತಾರಾ ಅನ್ನೋ ಪ್ರಶ್ನೆ ಮೂಡಿದೆ.

ad


ಹೌದು ಮುಂಬೈನ ರಿನೈಸೈನ್​ ಹೊಟೇಲ್​ ರಾಜ್ಯರಾಜಕಾರಣದ ಕೇಂದ್ರ ಬಿಂದುವಾಗಿದ್ದು, ಅತೃಪ್ತರ ಭೇಟಿಗೆ ಆಗಮಿಸಿರುವ ಡಿಕೆಶಿಯನ್ನು ಗೇಟ್​ನಲ್ಲೇ ತಡೆದಿರುವ ಮುಂಬೈ ಪೊಲೀಸರು ಮನವೊಲಿಸಿ ವಾಪಸ್ ಕಳಿಸುವ ಹುನ್ನಾರದಲ್ಲಿದ್ದಾರೆ.


ಆದರೆ ಈ ಪ್ರಯತ್ನಗಳಿಗೆ ಬಗ್ಗದ ಡಿ.ಕೆ.ಶಿವಕುಮಾರ್ ಖಡಕ್​ ಆಗಿ ಉತ್ತರ ನೀಡಿದ್ದು, ನಾನು ಒಬ್ಬನೇ ಬಂದಿದ್ದೇನೆ. ಒಬ್ಬನೇ ಹೋರಾಡ್ತೇನೆ. ಬಿಜೆಪಿಯವರ ಯಾವ ಘೋಷಣೆಗೂ ಹೆದರುವ ಪ್ರಶ್ನೆಯೇ ಇಲ್ಲ. ಸಾವಿರ ಘೋಷಣೆಗೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ.
ನಮ್ಮ ಶಾಸಕರನ್ನು ಭೇಟಿ ಮಾಡೋಕೆ ನನಗೆ ಯಾರ ಸಹಾಯವೂ ಅಗತ್ಯವಿಲ್ಲ. ಮಹಾರಾಷ್ಟ್ರ ಕಾಂಗ್ರೆಸ್​ ಸಹಾಯ ಕೇಳುವ ಪ್ರಶ್ನೆಯೇ ಇಲ್ಲ. ಒಳಗಿರುವ ನನ್ನ ಸಹೋದರರೇ ನನ್ನನ್ನು ಕರೆಸಿ ಮಾತನಾಡುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಒಂದೊಮ್ಮೆ ಹೊಟೇಲ್ ಪ್ರವೇಶಕ್ಕೆ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ನೀಡದೇ ಇದ್ದಲ್ಲಿ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದ್ದು, ಡಿ.ಕೆ.ಶಿ ಹೊಟೇಲ್​ ಬಳಿಯೇ ಇರಲು ನಿರ್ಧರಿಸಿದ್ದಾರೆ. ಈ ಮಧ್ಯೆ ಡಿಕೆಶಿ ಹೊಟೇಲ್ ಪ್ರವೇಶ ಪ್ರಯತ್ನದಿಂದ ಒಳಗಿರುವ ಅತೃಪ್ತ ಶಾಸಕರು ಆತಂಕಿತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.