ಕಾಲಾ ವಿರುದ್ಧ ಮುಗಿಯದ ಕನ್ನಡಿಗರ ಆಕ್ರೋಶ- ಪೋಸ್ಟರ್​ ಹರಿದು ಪ್ರತಿಭಟಿಸಿದ ಕಾರ್ಯಕರ್ತರು!

 

ad

 

ಹೈಕೋರ್ಟ್​​ ಕಾಲಾ ಚಿತ್ರ ಪ್ರದರ್ಶನಕ್ಕೆ ಸೂಕ್ತಭದ್ರತೆ ನೀಡುವಂತೆ ಆದೇಶಿಸಿದ ಬೆನ್ನಲ್ಲೇ ಕಾಲಾ ಚಿತ್ರದ ವಿರುದ್ಧ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಂಧಿನಗರದಲ್ಲಿ ಕಾಲಾ ಸಿನಿಮಾ ವಿತರಕರ ಕಚೇರಿ ಮುಂದೇ ಪ್ರತಿಭಟನೆ ನಡೆಸಿದ ಕನ್ನಡ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಹಾಗೂ ಕರವೇ ಕಾರ್ಯಕರ್ತರು ಕಾಲಾ ಚಿತ್ರದ ಪೋಸ್ಟರ್ ಹರಿದು ಹಾಕಿ ಪ್ರತಿಭಟನೆ ನಡೆಸಿದರು.
ಅಲ್ಲದೇ ಕಾಲಾ ಕರಿಕಾಳನ್​ ಫೋಸ್ಟರ್​​ ಹರಿದು ಚಪ್ಪಲಿಯಲ್ಲಿ ಹೊಡೆದು ಪ್ರತಿಭಟನೆ ನಡೆಸಿದರು. ಅಲ್ಲದೇ ಚಿತ್ರದ
ವಿತರಣೆ ಹಕ್ಕು ಖರೀದಿಸಿರೋ ಆರ್ ವಿ ದೇವರಾಜ್ ವಿರುದ್ದವೂ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಿಗರ ವಿರುದ್ಧ ಮಾತನಾಡಿದ ರಜನಿ ವಿರುದ್ಧ ಕರವೇ ಕಾರ್ಯಕರ್ತರು ಕಾವೇರಿ ವಿಚಾರದಲ್ಲಿ ಕನ್ನಡಿಗರ ವಿರುದ್ಧ ಮಾತನಾಡಿದ ರಜನಿಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದರು. ಅಲ್ಲದೇ ಕನ್ನಡ ಸಂಘಟನೆಗಳ ಒಕ್ಕೂಟದ ಸದಸ್ಯರು ಬೆಂಗಳೂರಿನ ಪ್ರಮುಖ ಮಾಲ್​ಗಳಿಗೆ ತೆರಳಿ ಚಿತ್ರ ಪ್ರದರ್ಶನ ಮಾಡದಂತೆ ಮನವಿ ಮಾಡಿದರು.