ಕರ್ನಾಟಕದಲ್ಲಿ ಬಂದ್​ ಯಶಸ್ವಿ- ಆಂಧ್ರಪ್ರದೇಶದಲ್ಲಿ ಪೆಟ್ರೋಲ್ ದರ ಇಳಿಕೆ- ನಮ್ಮಲ್ಲೂ ಪೆಟ್ರೋಲ್-ಡಿಸೇಲ್ ದರ ಇಳಿಸ್ತಾರ ಕುಮಾರಣ್ಣ?!

ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​ ಕರೆ ನೀಡಿದ್ದ ಭಾರತ ಬಂದ್​ಗೆ ರಾಜ್ಯ ಸ್ತಬ್ಧವಾಗಿದ್ದರೇ ಅತ್ತ , ಇಲ್ಲಿನ ಬಂದ್​​ನ ಅಲ್ಲಿ ಕೊಡುಗೆ ಎಂಬಂತೆ ಆಂಧ್ರಪ್ರದೇಶದಲ್ಲಿ ಪೆಟ್ರೋಲ್​ ಮತ್ತು ಡಿಸೇಲ್​ ದರ ಕಡಿಮೆಯಾಗಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಆದೇಶ ಹೊರಡಿಸಿದ್ದಾರೆ.

ad

ಮಧ್ಯಾಹ್ನದ ವೇಳೆ ಸಭ ನಡೆಸಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪೆಟ್ರೋಲ್ ಮತ್ತು ಡಿಸೇಲ್​ ಮೇಲಿನ ಮೌಲ್ಯವರ್ಧಿತ ದರ(ವ್ಯಾಟ್​) ಕಡಿತಗೊಳಿಸಿ ಆದೇಶಿಸಿದ್ದಾರೆ. ಇದರಿಂದ ತಕ್ಷಣವೇ ಪೆಟ್ರೋಲ್​ ಮತ್ತು ಡಿಸೇಲ್ ದರ 2 ರೂಪಾಯಿ ಕಡಿಮೆಯಾಗಿದೆ.
ಈ ಹಿಂದೆ ರಾಜಸ್ಥಾನ ಸರ್ಕಾರ ಕೂಡ ಇಂಧನಗಳ ಮೇಲಿನ ವ್ಯಾಟ್​ನ್ನು ಶೇಕಡಾ 4 ರಷ್ಟು ಕಡಿತಗೊಳಿಸಿತ್ತು. ಇದರಿಂದ ಅಲ್ಲಿಯೂ ಕೂಡ ಪೆಟ್ರೋಲ್ ಮತ್ತು ಡಿಸೇಲ್ ದರ ಇಳಿಕೆಯಾಗಿದೆ. ಆದರೇ ರಾಜ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತ್ರ ಈ ಬಗ್ಗೆ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ.

ಪೆಟ್ರೋಲ್-ಡಿಸೇಲ್ ಮೇಲಿನ ಸೆಸ್​ ಕಡಿಮೆ ಮಾಡುವ ಕುರಿತು ಪ್ರಧಾನಿಯವರೊಂದಿಗೆ ಮಾತನಾಡುವುದಾಗಿ ಕುಮಾರಸ್ವಾಮಿ ಹೇಳಿರೋದನ್ನು ಹೊರತುಪಡಿಸಿದರೇ ಮತ್ಯಾವುದೇ ಬೆಳವಣಿಗೆ ಇಲ್ಲ. ಆದರೇ ಇತರ ರಾಜ್ಯ ಸರ್ಕಾರಗಳ ಮಾತ್ರ ಬೆಲೆ ಇಳಿಕೆ ಮಾಡುತ್ತಿದೆ. ಹೀಗಾಗಿ ಈಗ ರಾಜ್ಯದಲ್ಲಿ ವಾಹನ ಸವಾರರು ರಾಜ್ಯ ಸರ್ಕಾರದತ್ತ ನೀರಿಕ್ಷೆಯ ನೋಟ ನೆಟ್ಟಿದ್ದಾರೆ.