ಮೋದಿ ನಾಡಿಗೆ ಕರ್ನಾಟಕದ ಚಿರತೆ….!!

ಪ್ರಧಾನಿ ನರೇಂದ್ರ ಮೋದಿ ನಾಡಿಗೆ 6 ಚಿರತೆಗಳನ್ನು ರವಾನೆ ಮಾಡಲಾಗಿದೆ. ಹೌದು, ಶಿವಮೊಗ್ಗದ ಹುಲಿ ಮತ್ತು ಸಿಂಹಧಾಮದಿಂದ ಬರೋಬ್ಬರಿ 6 ಚಿರತೆಗಳನ್ನು ಗುಜರಾತ್​ನ ಅಹಮದಾಬಾದ್​ಗೆ ಸ್ಥಳಾಂತರಿಸಲಾಗಿದೆ.

ad

ಸುಸಜ್ಜಿತ ಲಾರಿಯಲ್ಲಿ 6 ಪ್ರತ್ಯೇಕ ಬೋನ್​ಗಳನ್ನು ಇಟ್ಟು ಅಹಮದಾಬಾದ್​ಗೆ ರವಾನೆ ಮಾಡಲಾಗಿದೆ. ಲಯನ್ ಸಫಾರಿಯಲ್ಲಿ ಒಟ್ಟು 24 ಚಿರತೆಗಳು ಇದ್ದುವು. ಅದರಲ್ಲಿ 6 ಚಿರತೆಗಳನ್ನು ಸ್ಥಳಾಂತರ ಮಾಡಿರೋದ್ರಿಂದ ಸದ್ಯ 18 ಚಿರತೆಗಳು ಮಾತ್ರ ಉಳಿದುಕೊಂಡಿವೆ. ಗುಜರಾತ್ ಸರಕಾರದ ಕೋರಿಕೆ ಮೇರೆಗೆ ಕೇಂದ್ರೀಯ ಸರಕಾರ ಮೃಗಾಲಯ ಪ್ರಾಧಿಕಾರದ ಸೂಚನೆ ಅನ್ವಯ ಈ ಚಿರತೆಗಳ ಸ್ಥಳಾಂತರ ಮಾಡಲಾಗಿದೆ. ಹುಲಿ ಮತ್ತು ಸಿಂಹಧಾಮದಲ್ಲಿ ಚಿರತೆಗಳ ಸಂಖ್ಯೆ ನಿರಂತರವಾಗಿ ವೃದ್ಧಿಯಾಗ ತೊಡಗಿತ್ತು. ಆಹಿನ್ನೆಲೆಯಲ್ಲಿ ಮೂರು ನಾಲ್ಕು ತಿಂಗಳ ಹಿಂದೆಯೇ ಅರಣ್ಯ ಇಲಾಖೆಯವರು ಸ್ಥಳಾಂತರ ಮಾಡುತ್ತೇವೆ ಅಂತ ಹೇಳ್ತಾ ಇದ್ರು. ಅದಕ್ಕೆ ಈಗ ಕಾಲ ಕೂಡಿ ಬಂದಿದ್ದು, 6 ಚಿರತೆಗಳು ಮೋದಿ ನಾಡಿನತ್ತ ಹೆಜ್ಜೆ ಹಾಕಿವೆ.