ಕೆ.ಸಿ.ವ್ಯಾಲಿ ಸಂಸ್ಕರಿತ ತ್ಯಾಜ್ಯ ನೀರು ವಿವಾದ- ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್​​!

 

ad

ಕೋಲಾರ ಜಿಲ್ಲೆಯ 126 ಕೆರೆಗಳಿಗೆ ಹರಿಸುತ್ತಿದ್ದ 1400 ಕೋಟಿ ವೆಚ್ಚದ ಕೆ.ಸಿ ವ್ಯಾಲಿ ಯೋಜನೆಯ ಸಂಸ್ಕರಿತ ತ್ಯಾಜ್ಯ ನೀರಿಗೆ ಸಂಬಂಧಿಸಿದ ತಡೆಯಾಜ್ಞೆ ತೆರವುಗೊಂಡಿದೆ. ಸಂಸ್ಕರಿತ ತ್ಯಾಜ್ಯ ನೀರನ್ನು ಕೆರೆಗಳಿಗೆ ಹರಿಸದಂತೆ ತಡೆಯಾಜ್ಞೆ ನೀಡಲಾಗಿತ್ತು.
​ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಸತತವಾಗಿ ಮೂರು ದಿನಗಳ ಕಾಲ ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯ ಈ ತೀರ್ಪು ನೀಡಿದೆ. ಸರ್ಕಾರ ಪರ ವಾದ ಮಂಡನೆ ಮಾಡಿದ ಸರ್ಕಾರಿ ಅಭೀಯೋಜಕ ಉದಯ ಹೊಳ್ಳ ಕೆ.ಸಿ ವ್ಯಾಲಿಗೆ ಹರಿದು ಹೋಗುತ್ತಿರುವ ನೀರನ್ನು ಸರ್ಕಾರ ಸಂಪೂರ್ಣ ಶುದ್ಧೀಕರಿಸಿಯೇ ಬಿಡುತ್ತಿದೆ. ಕ್ಲೋರಿನೇಷನ್ ಮುಖಾಂತರ ನೀರಿನ‌ ಕೊಳಕು ಮತ್ತು ಅಶುದ್ಧತೆಯನ್ನು ತೆಗೆದು ಹಾಕಿ ಹರಿಬಿಡಲಾಗುತ್ತಿದೆ. ಎಸ್‌.ಟಿ.ಪಿ ಘಟಕಗಳಲ್ಲಿ ನೀರಿನ‌ ಶುದ್ಧತೆಯ ಬಗ್ಗೆ ನಡೆಯುವ ಎಲ್ಲ ಹಂತದ ಪ್ರಕ್ರಿಯೆಗಳ ವರದಿ ನೀಡಲಾಗಿದೆ ಎಂದ್ರು.

ನ್ಯಾಯಾಲಯದಲ್ಲಿ ವಾದ ಪ್ರತಿವಾದವನ್ನು ಹಾಲಿಸಿದ ನ್ಯಾಯಮೂರ್ತಿ ದಿನೇಶ್​ ಮಾಹೇಶ್ವರಿ ಅವರಿಗೆ ಕೆಸಿ ವ್ಯಾಲಿ ಯೋಜನೆಯ ಅಧಿಕಾರಿಗಳು ನೀರಿನ ಗುಣಮಟ್ಟದ ಬಗ್ಗೆ ಎಲ್ಲಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇನ್ನು ಈ ಎಲ್ಲಾ ವರದಿಗಳನ್ನ ಪರಿಶೀಲನೆ ಮಾಡಿ ಮತ್ತೆ ಕೆರೆಗಳಿಗೆ ನೀರು ಹರಿಸಲು ತೀರ್ಪು ನೀಡಿದ್ರು. ಇನ್ನು ಈ ವೇಳೆ ಯೋಜನೆ ಅಧಿಕಾರಿಗಳಿಗೆ ಶರತುಬದ್ದ ಸೂಚನೆ ನೀಡಿ ತಡೆಯಾಜ್ಞೆ ತೆರವುಗೊಳಿಸಿ ನೀರು ಹರಿಸುವಂತೆ ಸೂಚನೆ ನೀಡಿ ನೀರು ಹರಿದ ಹದಿನೈದು ದಿನಗಳ ನಂತರ ಕೆಸಿ ವ್ಯಾಲಿ ನೀರಿನ ಗುಣ್ಣಮಟ್ಟದ ವರದಿಯನ್ನು ನ್ಯಾಯಾಲಯಕ್ಕೆ ನೀಡುವಂತೆ ನ್ಯಾಯಾಮೂರ್ತಿ ದಿನೇಶ್​ ಮಾಹೇಶ್ವರಿ ಆದೇಶ ನೀಡಿದ್ರು. ಇನ್ನು ಈ ಆದೇಶದಿಂದ ಮತ್ತೆ ಕೋಲಾರ ಜಿಲ್ಲೆಯ ಕೆರೆಗಳಿಗೆ ನೀರು ಬಂತು ಎಂಬ ಖುಷಿಯಲ್ಲಿ ಜನ್ರು ವಿಜಯೋತ್ಸವ ಆಚರಿಸಲು ಮುಂದಾಗಿದ್ದಾರೆ.