ಮುಂದುವರಿದ ಸಿಎಂ ಕುಮಾರಸ್ವಾಮಿ ಟೆಂಪಲ್ ರನ್​- ಕನಕದುರ್ಗಿ ಶಕ್ತಿಪೀಠಕ್ಕೆ ಭೇಟಿ ನೀಡಿದ ಕರ್ನಾಟಕ ಸಿಎಂ!

 

ad

ಸರ್ಕಾರ ಶತದಿನ ಪೊರೈಸಿದ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ತಮ್ಮ ಟೆಂಪಲ್​ ರನ್​ ಮುಂದುವರೆಸಿದ್ದಾರೆ. ರಾಹುಲ್ ಗಾಂಧಿ ಭೇಟಿಗೆ ದೆಹಲಿಗೆ ತೆರಳಿದ್ದ ಕುಮಾರಸ್ವಾಮಿ ಅಲ್ಲಿಂದಲೇ ಮತ್ತೆ ದೇವಾಲಯ ಪ್ರವಾಸ ಆರಂಭಿಸಿದ್ದಾರೆ.
ಇಂದು ಆಂಧ್ರಪ್ರದೇಶದ ಕನಕದುರ್ಗಿ ದೇವಾಲಯಕ್ಕೆ ತೆರಳಲಿರುವ ಕುಮಾರಸ್ವಾಮಿ, ಕುಟುಂಬ ಸಮೇತ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಶ್ರಾವಣ ಶುಕ್ರವಾರದ ಹಿನ್ನೆಲೆಯಲ್ಲಿ ಸಿಎಂ ಭೇಟಿ ನೀಡುತ್ತಿದ್ದು ಪೂಜೆ ಸಲ್ಲಿಸಲಿದ್ದಾರೆ. ಇತ್ತೀಚಿಗೆ ಸಿಎಂ ಕುಮಾರಸ್ವಾಮಿ ವಿಶೇಷವಾಗಿ ಶಕ್ತಿದೇವತೆಗಳ ಮೊರೆ ಹೋಗುತ್ತಿದ್ದಾರೆ. ಇತ್ತೀಚಿಗಷ್ಟೇ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಭೇಟಿ ನೀಡಿದ್ದ ಸಿಎಂ ಕುಮಾರಸ್ವಾಮಿ ಅಲ್ಲಿಯೂ ವಿಶೇಷ ಪೂಜೆ ಸಲ್ಲಿಸಿದ್ದರು.

ಬಳಿಕ ಮದುರೈನ ಮೀನಾಕ್ಷಿ, ತಿರಚೂರಿನ ಪದ್ಮಾವತಿಗೂ ಕುಮಾರಸ್ವಾಮಿ ಪೂಜೆ ಸಲ್ಲಿಸಿದ್ದರು. ಬಳಿಕ ಇದೀಗ ರಾಜಕಾರಣಿಗಳು ವಿಶೇಷವಾಗಿ ಆರಾಧಿಸುವ ಕನಕದುರ್ಗಿ ದೇವಾಲಯಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ತೆಲಂಗಾಣ ಚುನಾವಣೆ ವೇಳೆ ಕೆಸಿಆರ್​ ಸಿಎಂ ಆಗುವ ಮುನ್ನವೂ ಇದೇ ಕನಕದುರ್ಗಿ ದೇವಾಲಯಕ್ಕೆ ಮುಡಿಪು ಕಟ್ಟಿದ್ದರು.