ಉಟೋ ಉಟೋ ಅಂದ್ರೆ ಮೇಲೆಳುತ್ತೆ ಲಿಂಬೆಹಣ್ಣು- ಈ ವಿಸ್ಮಯಕಂಡು ಬೆಚ್ಚಿಬಿತ್ತು ನೈರಬೈಲಿ!

 

ad

ಕೋಲಾರ ಗಡಿಭಾಗದ ಆಂಧ್ರದ ಚಿತ್ತೂರಿನ ನೈರಬೈಲಿನಲ್ಲಿ ನಡೆದ ಕ್ಷುದ್ರಪೂಜೆಗೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.ಗ್ರಾಮದ ಹೊರವಲಯದಲ್ಲಿ ಪಾಳುಬಿದ್ದ ಪುರಾತನ ವೆಂಕಟೇಶ್ವರ ದೇವಾಲಯದಲ್ಲಿ ಕಳೆದ ಮೂರು ದಿನಗಳಿಂದ ದುಷ್ಕರ್ಮಿಗಳು ರಾತ್ರಿ ವೇಳೆ ನಿಧಿಗಾಗಿ ಕ್ಷುದ್ರಪೂಜೆ ಮಾಡ್ತಿದ್ರು. ದೇವಾಲಯದ ಬಳಿ ಅಪರಿಚಿತರು ಓಡೋಡೋದನ್ನು ಗಮನಿಸಿ ಹಿಂಬಾಲಿಸಿದಾಗ ನಾಲ್ವರು ಕ್ಷುದ್ರಪೂಜೆ ಮಾಡೋದು ಗೊತ್ತಾಗಿದೆ.
ಇನ್ನು ಇರೋ ಜಾಗದಲ್ಲಿ ಕ್ಷುದ್ರಪೂಜೆ ಮಾಡಿ ನಿಂಬೆಹಣ್ಣ ಇಟ್ಟರೆ ಆ ನಿಂಬೆಹಣ್ಣು ತನ್ನಷ್ಟಕ್ಕೇ ತಾನೇ ಮೇಲೆ ಹೋಗುತ್ತದೆ. ಎನ್ನಲಾಗಿದ್ದು, ಇದನ್ನು ಒಬ್ಬ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾನೆ. ಉಟೋ ಉಟೋ ಎಂದ್ರೆ ನಿಂಬೆಹಣ್ಣು ಚಲಿಸುತ್ತದೆ ಎನ್ನಲಾಗಿದೆ. ಇನ್ನು ಈ ಕ್ಷುದ್ರ ಪೂಜೆ ನಡೆಯುತ್ತಿರೋದನ್ನು ಗಮನಿಸಿದ ಗ್ರಾಮಸ್ಥರನ್ನು ಸ್ಥಳಕ್ಕೆ ಬಂದಿದ್ದು, ಇದನ್ನು ನೋಡಿದ ದುರ್ಷ್ಕಮಿಗಳು ಪಾರಾರಿಯಾಗಲು ಯತ್ನಿಸಿದ್ದಾರೆ.

ಈ ವೇಳೆ ಇಬ್ಬರನ್ನು ಹಿಡಿದ ಗ್ರಾಮಸ್ಥರು ಭಾಕರಪೇಟೆ ಪೋಲಿಸರಿಗೆ ಒಪ್ಪಿಸಿದ್ದಾರೆ. ನಿಂಬೆಹಣ್ಣು ತಾನಾಗಿ ಮೇಲೆ ಹೋಗುತ್ತಿರುವ ದೃಶ್ಯಗಳನ್ನು ಕಂಡು ಜನ ಭಯಭೀತರಾಗಿದ್ದಾರೆ. ದೇವಾಲಯದಲ್ಲಿ ಕಳೆದ ಮೂರು ದಿನಗಳಿಂದ ದುಷ್ಕರ್ಮಿಗಳು ರಾತ್ರಿ ವೇಳೆ ಯಾರೋ ಅಪರಿಚಿತರು ತಿರುಗಾಡೋದು, ದೇವಾಲಯ ಗರ್ಭಗುಡಿ ಮುಂಬಾಗ ಕಲ್ಲುಹೊಡೆಯುತ್ತಿರುವುದನ್ನು ಗಮನಿಸಿದ್ದಾರೆ. ಅನುಮಾನಗೊಂಡು ದೇವಾಲಯದ ಬಳಿ ಹೋಗಿ ನೋಡಿದ್ರೆ, ನಾಲ್ಕುಮಂದಿ ಅಪರಿಚಿತರು ಪೂಜೆಯಲ್ಲಿ ನಿರತರಾಗಿದ್ದರು.


ಇನ್ನು ಪೂಜೆ ಸಮಯದಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಪತ್ರಿಕೆಯಲ್ಲಿ ಬಂದಿರುವ ಚಿತ್ರಪಟವನ್ನು ಇಟ್ಟು ವಿಚಿತ್ರವಾಗಿ ಕುಂಕುಮ ಇನ್ನಿತರ ವಸ್ತುಗಳಿಂದ ಚಿತ್ರಬಿಡಿಸಿ ಪೂಜೆ ಮಾಡಿದ್ದಾರೆ. ಗ್ರಾಮಸ್ಥರನ್ನು ನೋಡಿದ ದುರ್ಷ್ಕಮಿಗಳು ಪಾರಾರಿಯಾಗಲು ಯತ್ನಿಸಿದ್ದ ವೇಳೆ ಇಬ್ಬರನ್ನು ಹಿಡಿದು ಭಾಕರಪೇಟೆ ಪೋಲಿಸರಿಗೆ ಒಪ್ಪಿಸಿದ್ದಾರೆ. ನಿಂಬೆಹಣ್ಣು ತಾನಾಗಿ ಮೇಲೆ ಹೋಗುತ್ತಿರುವ ದೃಶ್ಯಗಳು ಕಂಡುಬಂದವು