ಸುಮಲತಾ ಪರ ಕೆಲಸ ಮಾಡಲಿಲ್ಲ ಅಂತ ನರೇಂದ್ರಸ್ವಾಮಿ ಮಹದೇಶ್ವರ್​​ನ ಮೇಲೆ ಆಣೆ ಮಾಡಲಿ! MLA ಅನ್ನದಾನಿ ಸವಾಲು!!

ಲೋಕಸಭೆ ಮತ ಸಮರ ಮುಗಿದಿದ್ದರೂ ರಾಜ್ಯದಲ್ಲಿ ಆಣೆ-ಪ್ರಮಾಣ ರಾಜಕೀಯ ಮಾತ್ರ ತೀವ್ರಗೊಂಡಿದೆ. ಇದುವರೆಗೂ ಧರ್ಮಸ್ಥಳ ಮಂಜುನಾಥ ಸ್ವಾಮಿ ಮೇಲೆ ಆಣೆ-ಪ್ರಮಾಣ ಮಾಡುವ ವಿಚಾರ ಮಾತನಾಡುತ್ತಿದ್ದ ನಾಯಕರು, ಇದೀಗ ಮಲೆಮಹದೇಶ್ವರನನ್ನು ಆಣೆ ಪ್ರಮಾಣಕ್ಕೆ ಎಳೆದುತಂದಿದ್ದಾರೆ.

ad

ಹೌದು ಮಂಡ್ಯ ರಾಜಕೀಯದ ವಿಚಾರದಲ್ಲಿ ಮಾತನಾಡಿದ ಜೆಡಿಎಸ್​ ಶಾಸಕ ಕೆ.ಅನ್ನದಾನಿ ಮಾಜಿ ಶಾಸಕ ನರೇಂದ್ರ ಸ್ವಾಮಿಯವರಿಗೆ ಮಲೆಮಹದೇಶ್ವರನ ಮೇಲೆ ಆಣೆ ಪ್ರಮಾಣ ಮಾಡುವಂತೆ ಸವಾಲು ಹಾಕಿದ್ದಾರೆ. ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರ ಕೆಲಸ ಮಾಡಿಲ್ಲ ಎಂದು ನರೇಂದ್ರಸ್ವಾಮಿ ಪ್ರಮಾಣ ಮಾಡಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಸುಮಲತಾ ಪರ ಚುನಾವಣೆ ಮಾಡಿ ಸುಳ್ಳು ಹೇಳುತ್ತಿದ್ದಾರೆ. ಇಷ್ಟವಿಲ್ಲ ಮಾಡ್ಲಿಲ್ಲ ಅಂತಾ ಹೇಳಲಿ. ಅದನ್ನು ಬಿಟ್ಟು ತಟಸ್ಥವಾಗಿದ್ದೆ. ಚುನಾವಣೆ ಮಾಡಿಲ್ಲ ಅನ್ನೋದು ಸತ್ಯಕ್ಕೆ ದೂರವಾದ ವಿಚಾರ. ನೀವು ಸುಮಲತಾ ಪರ ಕೆಲ್ಸ ಮಾಡಿದ್ದೀರಿ, ಮಾಡಿದ್ದೀರಿ, ಮಾಡಿದ್ದೀರಿ. ಇದು ಸುಳ್ಳು ಅಂತಾ ಹೇಳುದ್ರೆ ನಮ್ಮ ಜೊತೆ ಬರೋದು ಬೇಡ.ಮೊದಲು ಹೋಗಿ ಮಲೆ ಮಹದೇಶ್ವರನ ಮೇಲೆ ಪ್ರಮಾಣ ಮಾಡಿ ಬನ್ನಿ. ನಂತರ ನಾನು ಹೋಗಿ ಪ್ರಮಾಣ ಮಾಡಿ ಬರ್ತೀನಿ.ನೀವು ಯಾವಾಗಲೂ ಮಾದೇಶ್ವರನ ಮೇಲಿನ ಭಕ್ತಿಯಿಂದ ಬೊಟ್ಟು ಇಡ್ತೀರಾ, ಅದಕ್ಕೆ ಒಂದು ಬೆಲೆ ಸಿಗಲಿ.ಮೊದಲು ಹೋಗಿ ಪ್ರಮಾಣ ಮಾಡಿ ಬನ್ನಿ ಎಂದು ಗುಡುಗಿದ್ದಾರೆ.

ಅಧಿಕಾರಕ್ಕಾಗಿ ಸುಳ್ಳು ಹೇಳೋದನ್ನು ಬಿಡಿ ಎಂದಿರುವ ಅನ್ನದಾನಿ, ನೀವು ಸುಮಲತಾರಿಗೆ ವೋಟ್​ ಹಾಕಿಸಿಲ್ಲ ಅಂತ ಪ್ರಮಾಣ ಮಾಡಿ ಅವಾಗ ನಾವು ನಿಮ್ಮನ್ನು ನಂಬುತ್ತೇವೆ ಎಂದಿದ್ದಾರೆ. ಒಟ್ಟಿನಲ್ಲಿ ಮಂಡ್ಯದಲ್ಲಿ ಮತದಾನ ಮುಗಿದಿದ್ದರೂ ಇನ್ನು ರಾಜಕೀಯ ಮಾತ್ರ ಮುಗಿಯದಂತಾಗಿದ್ದು, ಕಾಂಗ್ರೆಸ್​-ಜೆಡಿಎಸ್​ ನಾಯಕರ ನಡುವೆ ವಾಗ್ವಾದ, ಆರೋಪ ಪ್ರತ್ಯಾರೋಪ ಜೋರಾಗಿದೆ.