ಹಲ್ಲೆ ಬೆನ್ನಲ್ಲೇ ದುನಿಯಾ ವಿಜಿ ಮೇಲೆ ಜೀವಬೆದರಿಕೆ ಕೇಸ್​- ಮತ್ತೆ ಸಂಕಷ್ಟಕ್ಕಿಡಾದ ದುನಿಯಾ ವಿಜಿ!

 

adಅದ್ಯಾಕೋ ಗೊತ್ತಿಲ್ಲ ನಟ ದುನಿಯಾ ವಿಜಯ್ ಅದೃಷ್ಟವೇ ಕೈಕೊಟ್ಟಂತಿದೆ. ಹೌದು ನಿನ್ನೆ ಮಧ್ಯರಾತ್ರಿಯಷ್ಟೇ ಜಿಮ್ ಟ್ರೇನರ್​ ಮೇಲೆ ಹಲ್ಲೆ ನಡೆಸಿ ಬಂಧನಕ್ಕೊಳಗಾಗಿರುವ ದುನಿಯಾ ವಿಜಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಸಾಲ ಕೊಟ್ಟ ಹಣ ವಾಪಸ ಕೇಳಿದ್ದಕ್ಕೆ ದುನಿಯಾ ವಿಜಿ ಬೆದರಿಕೆ ಹಾಕಿದ್ದಾರೆ ಎಂದು ನಿವೃತ್ತ ಯೋಧರೊಬ್ಬರು ಆರೋಪಿಸಿದ್ದಾರೆ.
ಮಾರುತಿಗೌಡ ಮೇಲಿನ ಹಲ್ಲೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ದುನಿಯಾ ವಿಜಿ ಮೇಲೆ ನಿವೃತ್ತ ಯೋಧರೊಬ್ಬರು ಪ್ರಕರಣ ದಾಖಲಿಸಿದ್ದಾರೆ. ನಿವೃತ್ತ ಸೈನಿಕ ವೆಂಕಟೇಶ್ ತಮಗೆ ದುನಿಯಾ ವಿಜಿ ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ನಿವೃತ್ತ ಯೋಧ ವೆಂಕಟೇಶ್, ದುನಿಯಾ ವಿಜಿ ಬಾಮೈದುನನಿಗೆ 4.5 ಲಕ್ಷ ರೂಪಾಯಿ ಸಾಲ ನೀಡಿದ್ದರು. ಆದರೇ ಆ ಹಣ ಹಿಂತಿರುಗಿಸಿರಲಿಲ್ಲ. ಇದನ್ನು ವಾಪಸ ಕೇಳಲು ಹೋಗಿದ್ದಕ್ಕೆ ದುನಿಯಾ ವಿಜಿ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ವೆಂಕಟೇಶ್ ಆರೋಪಿಸಿದ್ದು. ಈ ಕುರಿತು ಹೈಗ್ರೌಂಡ್ಸ್​ ಠಾಣೆಯಲ್ಲಿ ವೆಂಕಟೇಶ್ ದೂರು ನೀಡಿದ್ದಾರೆ. ಒಂದಾದ ಮೇಲೆ ಒಂದರಂತೆ ಸಂಕಷ್ಟಗಳಿಗೆ ದುನಿಯಾ ವಿಜಿ ತುತ್ತಾಗುತ್ತಿದ್ದು, ಕಾನೂನು ಉಲ್ಲಂಘಿಸಿ ದುನಿಯಾ ವಿಜಯ್ ತೊಂದರೆಗೊಳಗಾಗುತ್ತಿದ್ದಾರೆ.