ಮನುಷ್ಯನ ಕಣ್ಣೊಳಗಿತ್ತು ಜೀವಂತ ಹುಳು- ಆಫರೇಶನ್​ ಬಳಿಕ ಏನಾಯ್ತು ಗೊತ್ತಾ?!

 

ad


ಮನುಷ್ಯನ ಕಣ್ಣೊಳ್ಳಗೆ ಸಣ್ಣ ಕಸ ಬಿದ್ದರು ಸಹಿಸಿಕೊಳ್ಳೊದು ಕಷ್ಟ. ಹೀಗಿರುವಾಗ ವ್ಯಕ್ತಿಯೊಬ್ಬರ ಕಣ್ಣಿನಲ್ಲಿ 15 ಸೆಂ.ಮೀ. ಉದ್ದದ ಹುಳುವೊಂದು ಪತ್ತೆಯಾಗಿರುವ ವಿಚಿತ್ರ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಇದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳ ಮೂಲದ ವ್ಯಕ್ತಿಯೊಬ್ಬರು ಬಹಳ ಕಾಲದಿಂದ ಕಣ್ಣು ನೋವಿನಿಂದ ಬಳಲುತ್ತಿದ್ದರು. ನೋವು ತಡೆಯಲಾರದೆ ಕುಂದಾಪುರದ ಖಾಸಗಿ ನೇತ್ರಾಲಯದ ನೇತ್ರತಜ್ಞ ಡಾ.ಶ್ರೀಕಾಂತ ಶೆಟ್ಟಿ ಅವರ ಬಳಿ ಪರೀಕ್ಷಿಸಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಬಲಗಣ್ಣಿನ ಒಳಗೆ 15 ಸೆಂ.ಮೀ. ಉದ್ದದ ಜೀವಂತ ಹುಳುವನ್ನು ನೋಡಿದ್ದು, ಶಸ್ತ್ರಚಿಕಿತ್ಸೆ ನಡೆಸಿ ಅದನ್ನು ಜೀವಂತವಾಗಿ ಹೊರ ತೆಗೆದಿದ್ದಾರೆ.

ಇಷ್ಟು ದೊಡ್ಡ ಹುಳು ಕಣ್ಣಿನಲ್ಲಿ ಬೆಳೆದಿರುವುದು ದೇಶದಲ್ಲೇ ಅತಿ ವಿರಳ ಪ್ರಕರಣ ಎನ್ನಲಾಗಿದೆ ಚಿಕಿತ್ಸೆಗೊಳಗಾದ ವ್ಯಕ್ತಿ ಚೇತರಿಸಿಕೊಳ್ಳುತ್ತಿದ್ದಾರೆ. ಸೊಳ್ಳೆಗಳು ಕಚ್ಚಿದಾಗ ಲಾರ್ವಾ ಮನುಷ್ಯನ ರಕ್ತ ಸೇರಿ, ಮೊಟ್ಟೆಗಳು ಒಡೆದು ಹುಳುಗಳು ಬೆಳೆಯುತ್ತವೆ. ಹೀಗೆ ಕಣ್ಣಿನೊಳಗೆ ವುಚೆರೇರಿ ಬ್ಯಾಂಕ್ಯಾಪ್ಟಿ ಜಾತಿಗೆ ಸೇರಿದ ಲೋವಾ, ಡೈರೋಫೈಲಾ ಇತರ ಹುಳುಗಳು ಇರುತ್ತವೆ. ಇವು ಜೀವಕ್ಕೆ ಅಪಾಯವಲ್ಲದಿದ್ದರೂ ಕಣ್ಣು ಮಂಜಾಗಿ ಕಾಣುವುದು ಸಮಸ್ಯೆಗಳು ಕಂಡು ಬರುತ್ತವೆ ಅಂತಾ ವೈದ್ಯರು ಹೇಳತ್ತಿದ್ದಾರೆ. ಆದರೇ ಕಣ್ಣಿನಲ್ಲಿ ಹುಳ ಬೆಳೆದ ವ್ಯಕ್ತಿಯ ಹೆಸರು ಗೊತ್ತಾಗಿಲ್ಲ.