ಪ್ಲೈಓವರ್​ನಿಂದ ಕೆಳಕ್ಕೆ ಬಿದ್ದ ಲಾರಿ! ಅದೃಷ್ಟವಶಾತ ತಪ್ಪಿದ ಭಾರಿ ಅಪಾಯ!!

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ 5.45ರ ಸುಮಾರಿಗೆ ಭೀಕರ ಅಪಘಾತ ಸಂಭವಿಸಿದೆ. ಯಶವಂತಪುರ ಫ್ಲೈ ಓವರ್​ನಲ್ಲಿ ಅತಿ ವೇಗವಾಗಿ ಬರುತ್ತಿದ್ದ ಟ್ರಕ್​​ವೊಂದು ಚಾಲಕನ ನಿಯಂತ್ರಣ ತಪ್ಪಿ ಪ್ಲೈ ಓವರ್​​ನಿಂದ ಕೆಳಗೆ ಬಿದ್ದಿದೆ.


ಪ್ಲೈ ಓವರ್​​​ನಿಂದ ಲಾರಿ ಕೆಳಕ್ಕೆ ಬಿದ್ದ ರಭಸಕ್ಕೆ ಟ್ರಕ್ ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕನಿಗೆ ಗಂಭಿರ ಗಾಯವಾಗಿದೆ. ಪುಣೆಯಿಂದ ಅಣಬೆ ತುಂಬಿಕೊಂಡು ಬೆಂಗಳೂರಿಗೆ ಬರ್ತಿದ್ದ ವೇಳೆ ಈ ಘಟನೆ ನಡೆದಿದೆ. ಯಶವಂತಪುರ ಸಂಚಾರಿ ಪೊಲೀಸ್ರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ರು.