ನಾಡಿನೆಲ್ಲೆಡೆ ವರಮಹಾಲಕ್ಷ್ಮೀ ವ್ರತ ಸಂಭ್ರಮ- ಗಗನಕ್ಕೇರಿದ ಹೂವು-ಹಣ್ಣಿನ ಬೆಲೆ!

ನಾಡಿನೆಲ್ಲೆಡೆ ವರಮಹಾಲಕ್ಷ್ಮೀ‌ ಹಬ್ಬದ ಸಡಗರ ಮನೆ ಮಾಡಿದೆ. ಬೆಂಗಳೂರು ಸೇರಿದಂತೆ ಹಲವು ನಗರಗಳ ಮಾರುಕಟ್ಟೆಯಲ್ಲಿ ಹಬ್ಬದ ಸರಕುಗಳ ಖರೀದಿ ಭರಾಟೆ ಜೋರಾಗಿದೆ. ಐಟಿಸಿಟಿಯಲ್ಲೂ ಹಬ್ಬದ ಖರೀದಿ ಕಂಡು ಬರ್ತಿದೆ. ಕೆ ಆರ್ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರದಲ್ಲಿ ಜನರು ನಿರತರಾಗಿದ್ದಾರೆ.

ಮಾರು ಸೇವಂತಿಗೆ ಹೂವಿಗೆ 150ರಿಂದ 175 ರೂವರೆಗಿದೆ. ಕನಕಾಂಬರ ಮಾರಿಗೆ 500 ರೂಪಾಯಿಯಷ್ಟಿದ್ದು, ಒಂದು ಜೋಡಿ ತಾವರೆ ಹೂವಿಗೆ 60 ರೂಪಾಯಿ ಇದೆ. ಹಣ್ಣುಗಳ ಬೆಳೆಯೂ ತುಸು ಜಾಸ್ತಿ ಇದೆ. ನಿನ್ನೆ 100 ರೂಪಾಯಿ ಇದ್ದ ಕೆಜಿ ಸೇಬು 150 ರೂವರೆಗೂ ಹೋಗಿದ್ದರೆ, ದಾಳಿಂಬೆ 100 ರೂಪಾರಿ, ದ್ರಾಕ್ಷಿ 100 ರೂಪಾಯಿ ಹೀಗೆ ಹಣ್ಣುಗಳ ರೇಟ್​ ಹೆಚ್ಚಾಗಿದೆ.
ಇನ್ನು ವರಲಕ್ಷ್ಮೀಪೂಜೆಗಾಗಿ ಬಳಕೆಯಾಗುವ ದೇವಿಯ ಮುಖವಾಡ, ಹಸಿರು ಸೇರಿದಂತೆ ವಿವಿಧ ಬಣ್ಣದ ಸೀರೆ ಮತ್ತು ಬಳೆಗಳು, ಭಾಗಿನ ಸಾಮಾಗ್ರಿ, ಸಿಹಿತಿಂಡಿಗಳು ಹೀಗೆ ಎಲ್ಲ ವಸ್ತುಗಳ ಬೆಲೆಯಲ್ಲೂ ಎರಿಕೆಯಾಗಿದ್ದು, ಬೆಲೆ ಏರಿಕೆಯ ನಡುವೆಯೂ ಮಾರುಕಟ್ಟೆಗಳು ತುಂಬಿತುಳುಕುತ್ತಿದೆ.