ನಮಗೆ ಪ್ರತಿಪಕ್ಷದ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಿ! ಅತೃಪ್ತ ಶಾಸಕರ ಹೊಸ ಬೇಡಿಕೆ!!

ಆತೃಪ್ತರ ಮತ್ತು ಸ್ಪೀಕರ್​​ ನಡುವಿನ ಸಂಘರ್ಷದ ನಡುವೆ ಸ್ಪೀಕರ್ ಕಚೇರಿಗೆ ಮತ್ತೊಂದು ದೂರು ಹೋಗಿದೆ. ವಿಪಕ್ಷದ ಕಡೆ ನಮಗೆ ಆಸನ ವ್ಯವಸ್ಥಗೆ ಕಲ್ಪಿಸುವಂತೆ ಪಕ್ಷೇತರ ಶಾಸಕರಾದ ಆರ್. ಶಂಕರ್​, ಹೆಚ್​​, ನಾಗೇಶ್​ ಸ್ಪೀಕರ್​​ಗೆ ಮನವಿ ಮಾಡಿದ್ದಾರೆ.

ad


ಸ್ವಹಸ್ತಾಕ್ಷರದಲ್ಲಿ ಸಭಾಧ್ಯಕ್ಷರಿಗೆ ಪತ್ರ ಬರೆದಿರುವ ಆರ್.ಶಂಕರ್ ಹಾಗೂ ಎಚ್​ ನಾಗೇಶ್ ನಾವು ಈಗಾಗಲೇ ಆಡಳಿತ ಪಕ್ಷಕ್ಕೆ ನೀಡಿರುವ ಬೆಂಬಲವನ್ನು ವಾಪಸ್ಸು ಪಡೆದಿದ್ದು, ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದೇವೆ. ಹೀಗಾಗಿ ನಮಗೆ ವಿಪಕ್ಷದ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಿಕೊಡಬೇಕೆಂದು ಕೋರಿದ್ದಾರೆ.


ಎರಡನೇ ಬಾರಿಗೆ ಸಚಿವ ಸಂಪುಟ ವಿಸ್ತರಣೆ ವೇಳೆ ಸ್ವತಂತ್ರ ಎಮ್​ಎಲ್​ಎ ಎಚ್.ನಾಗೇಶ್ ಮತ್ತು ಆರ್.ಶಂಕರ್​ಗೆ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಅಚ್ಚರಿ ಬೆಳವಣಿಗೆಯಲ್ಲಿ ಒಂದೇ ತಿಂಗಳ ಅವಧಿಯಲ್ಲಿ ಇಬ್ಬರು ಸಚಿವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಆಡಳಿತ ಪಕ್ಷಕ್ಕೆ ನೀಡಿದ ಬೆಂಬಲ ವಾಪಸ ಪಡೆದು ಬಿಜೆಪಿಯತ್ತ ಮುಖಮಾಡಿದ್ದಾರೆ.